Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

‘ಆರ್‌ಎಸ್‌ಎಸ್ ವ್ಯಕ್ತಿ'ಯಿಂದ ನನಗೆ 300 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು?: ಮಲಿಕ್

‘ಆರ್‌ಎಸ್‌ಎಸ್ ವ್ಯಕ್ತಿ'ಯಿಂದ ನನಗೆ 300 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು?: ಮಲಿಕ್
ನವದೆಹಲಿ , ಶುಕ್ರವಾರ, 22 ಅಕ್ಟೋಬರ್ 2021 (09:52 IST)
ನವದೆಹಲಿ : ತಾವು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ವೇಳೆ "ಅಂಬಾನಿ" ಮತ್ತು "ಆರ್ ಎಸ್ಎಸ್-ಸಂಬಂಧಿತ ವ್ಯಕ್ತಿ"ಗೆ ಸೇರಿದ ಎರಡು ಕಡತಗಳನ್ನು ಪಾಸ್ ಮಾಡಿದರೆ 300 ಕೋಟಿ ರೂಪಾಯಿ ಲಂಚ ನೀಡುವುದಾಗಿ ಹೇಳಿದ್ದರು. 


ಡೀಲ್ ಮತ್ತು ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿರುವ ಮಲಿಕ್ ಅವರು, ತಮ್ಮ ನಿರ್ಧಾರವನ್ನು ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.
ಪ್ರಸ್ತುತ ಮೇಘಾಲಯ ಗವರ್ನರ್ ಆಗಿರುವ ಸತ್ಯ ಪಾಲ್ ಮಲಿಕ್ ಅವರು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಬೆಂಬಲಿಸಿದ್ದರು ಮತ್ತು ರೈತರ ಪ್ರತಿಭಟನೆ ಮುಂದುವರಿದರೆ ತಮ್ಮ ಸ್ಥಾನವನ್ನು ತೊರೆದು ಅವರೊಂದಿಗೆ ನಿಲ್ಲಲು ಸಿದ್ಧ ಎಂದು ಹೇಳಿದ್ದರು.
"ಕಾಶ್ಮೀರಕ್ಕೆ ಹೋದ ನಂತರ, ಎರಡು ಕಡತಗಳು ನನಗೆ ಬಂದಿದ್ದವು. ಒಂದು ಅಂಬಾನಿಗೆ ಸೇರಿದ್ದು ಮತ್ತು ಇನ್ನೊಂದು ಆರ್ಎಸ್ಎಸ್-ಸಂಬಂಧಿತ ಮತ್ತು ಹಿಂದೆ ಮೆಹಬೂಬಾ ಮುಫ್ತಿ ನೇತೃತ್ವದ(ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಮಂತ್ರಿಯಾಗಿದ್ದ ವ್ಯಕ್ತಿಗೆ ಸೇರಿದ್ದ ಮತ್ತೊಂದು ಕಡತ. ಈ ವ್ಯಕ್ತಿ ತಾನು ಪ್ರಧಾನಿಗೆ ಬಹಳ ಹತ್ತಿರದವರು ಎಂದು ಹೇಳಿಕೊಂಡಿದ್ದರು. ಆದರೆ ಇದರಲ್ಲಿ
"ಹಗರಣ ನಡೆದಿದೆ ಎಂದು ಎರಡೂ ಇಲಾಖೆಗಳ ಕಾರ್ಯದರ್ಶಿಗಳು ನನಗೆ ಮಾಹಿತಿ ನೀಡಿದರು. ಅದರ ಪ್ರಕಾರ ನಾನು ಎರಡೂ ಡೀಲ್ಗಳನ್ನು ರದ್ದುಗೊಳಿಸಿದೆ' ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಕೆಲಸ : ಬೊಮ್ಮಾಯಿ ಆರೋಪ