Publish Date: Fri, 07 May 2021 (11:54 IST)
Updated Date: Fri, 07 May 2021 (11:56 IST)
ವಿಜಯವಾಡ : ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ ಹೆಂಡತಿಯನ್ನು ಮದ್ಯ ವ್ಯಸನಿ ಚಾಕುವಿನಿಂದ ಇರಿದ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಮಹಿಳೆ ಆಟಿಕೆ ಮಾರಿಕೊಂಡು ಜೀವನ ನಡೆಸುತ್ತಿದ್ದಾಳೆ. ಆದರೆ ಮದ್ಯ ವ್ಯಸನಿಯಾಗಿದ್ದ ಪತಿ ಮದ್ಯ ಖರೀದಿಸಲು ಪತ್ನಿಯ ಬಳಿ ಹಣ ಕೇಳಿದ್ದಾನೆ. ಆಕೆ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಚಾಕುವಿನಿಂದ ಪತ್ನಿಯನ್ನು ಇರಿದು ಪರಾರಿಯಾಗಿದ್ದಾನೆ.
ಘಟನೆಯಲ್ಲಿ ಮಹಿಳೆಗೆ ತೀವ್ರ ಗಾಯವಾಗಿದ್ದು ಮಹಿಳೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೊಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.