Publish Date: Fri, 12 Feb 2021 (11:05 IST)
Updated Date: Fri, 12 Feb 2021 (11:07 IST)
ಲೆಬನಾನ್ : ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ ಪತ್ನಿಯು ಡಿವೋರ್ಸ್ ಕೇಳಿದ್ದಕ್ಕೆ ಪತಿಯು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.
ಪತ್ನಿಯು ವೃತ್ತಿಯಲ್ಲಿ ಮಾಡೆಲ್. ಕೆಲವು ತಿಂಗಳ ಹಿಂದಷ್ಟೆ ಇವರಿಬ್ಬರೂ ಮದುವೆಯಾಗಿದ್ದರು. ಆದರೆ ಅವರ ನಡುವಿನ ಸಂಬಂಧ ಹೊಂದಾಣಿಕೆಯಾಗದ ಕಾರಣ ಪತ್ನಿಯು ಡಿವೋರ್ಸ್ ಕೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎ್ನಲಾಗಿದೆ.