Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿವೃತ್ತಿ ನಂತರ ಪ್ರಣಬ್ ಮುಖರ್ಜಿ ಜೀವನ ಹೇಗಿದೆ ಗೊತ್ತಾ?!

ನಿವೃತ್ತಿ ನಂತರ ಪ್ರಣಬ್ ಮುಖರ್ಜಿ ಜೀವನ ಹೇಗಿದೆ ಗೊತ್ತಾ?!
ನವದೆಹಲಿ , ಸೋಮವಾರ, 24 ಜುಲೈ 2017 (10:30 IST)
ನವದೆಹಲಿ: ಭಾರತದ ರಾಷ್ಟ್ರಪತಿ ಎನ್ನುವುದು ಪ್ರತಿಷ್ಠಿತ ಹುದ್ದೆ. ಈ ಹುದ್ದೆಯಿಂದ ನಿವೃತ್ತಿಯಾದ ಮೇಲೆ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೀವನ ಹೇಗಿರುತ್ತದೆ ಗೊತ್ತಾ? ಅವರಿಗೆ ಯಾವೆಲ್ಲಾ ಸೌಲಭ್ಯಗಳು ಇರುತ್ತವೆ? ಇಲ್ಲಿ ನೋಡಿ.


ರಾಷ್ಟ್ರಪತಿ ಭವನ ಬಿಟ್ಟ ಮೇಲೆ ಪ್ರಣಬ್ ಮುಖರ್ಜಿ ದೆಹಲಿಯ 10 ರಾಜಾಜಿ ರಸ್ತೆಯ ಎರಡು ಮಹಡಿಯ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಿಂದೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕೂಡಾ ಇಲ್ಲಿಯೇ ನೆಲೆಸಿದ್ದರು. ರಾಷ್ಟ್ರಪತಿ ಭವನದಿಂದ ತಮ್ಮ ವೈಯಕ್ತಿಕ ವಸ್ತುಗಳನ್ನು ಅವರು ತೆಗೆದುಕೊಂಡು ಹೋಗಬಹುದು.

ನಿವೃತ್ತಿ ವೇತನ 75000 ರೂ.ಗಳನ್ನು ಪ್ರತಿ ತಿಂಗಳು ಅವರು ಜೇಬಿಗಿಳಿಸಲಿದ್ದಾರೆ. ಉಚಿತ ವಿದ್ಯುತ್, ಸಹಾಯಕರು, ಪ್ರಯಾಣ ಭತ್ಯೆ ಅಲ್ಲದೆ, 60000 ರೂ. ಭತ್ಯೆಯನ್ನೂ ಪಡೆಯಲಿದ್ದಾರೆ. ಇದಲ್ಲದೆ, ಒಂದು ಮೊಬೈಲ್ ಫೋನ್, ಎರಡು ಸ್ಥಿರ ದೂರವಾಣಿ ಸೌಲಭ್ಯ ಸಿಗುತ್ತದೆ. ಭಾರತದಲ್ಲಿ ಎಲ್ಲಿ ಬೇಕಾದರೂ ಅವರು ಉಚಿತವಾಗಿ ಸರ್ಕಾರಿ ವಾಹನದಲ್ಲಿ ಪ್ರಯಾಣಿಸಬಹುದು.

ಇದಲ್ಲದೆ ಪ್ರತ್ಯೇಕ ಸಿಬ್ಬಂದಿಗಳು, ಸಹಾಯಕರನ್ನು ಹೊಂದುವ ಅವಕಾಶವಿದೆ. ಅಲ್ಲದೆ ಜೀವಮಾನ ಪರ್ಯಂತ ಅವರ ರಕ್ಷಣೆಯ ಜವಾಬ್ದಾರಿ ದೆಹಲಿ ಪೊಲೀಸರದ್ದಾಗಿರತ್ತದೆ. ಇದು ನಿವೃತ್ತ ರಾಷ್ಟ್ರಪತಿಯೊಬ್ಬರಿಗೆ ಸಿಗುವ ಸೌಲಭ್ಯಗಳು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾಗೆ ವಿಶೇಷ ಆತಿಥ್ಯ ಒಪ್ಪಿಕೊಂಡ ಅಧಿಕಾರಿಗಳು