ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ನಟರಾಜನ್ ಮತ್ತು ಕರೀಂ ಲಾಲ್ ತೆಲಗಿಗೆ ವಿಐಪಿ ಆತಿಥ್ಯ ನೀಡಲಾಗುತ್ತಿತ್ತು ಎನ್ನುವುದನ್ನು ಅಧಿಕಾರಿಗಳು ಸದನ ಸಮಿತಿ ಎದುರು ಒಪ್ಪಿಕೊಂಡಿದ್ದಾರೆ.
ಬಿಜೆಪಿ ಶಾಸಕ ಹಾಗೂ ಮಾಜಿ ಗೃಹ ಸಚಿವ ಆರ್ ಅಶೋಕ್ ನೇತೃತ್ವದ ಸಮಿತಿ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶಶಿಕಲಾಗೆ ಮಹಿಳಾ ವಿಭಾಗದ ಪಕ್ಕದಲ್ಲೇ ವಿಶೇಷ ಅಡುಗೆ ಕೋಣೆಯಲ್ಲಿ ವಿಶೇಷ ಬಾಣಸಿಗರಿಂದ ವಿಶೇಷ ಊಟ ರವಾನೆಯಾಗುತ್ತಿತ್ತು. ಇನ್ನು ಕರೀಂ ಲಾಲ್ ತೆಲಗಿಯ ಬಾಡಿ ಮಸಾಜ್ ಮಾಡಿಸುವುದಕ್ಕೆಂದೇ ಕೆಲವು ಖೈದಿಗಳನ್ನು ನಿಯೋಜಿಸಲಾಗಿತ್ತು ಎಂದು ಡಿಐಜಿ ರೂಪಾ ತಮ್ಮ ವರದಿಯಲ್ಲಿ ಹೇಳಿದ್ದರು.
ಇದು ತೀವ್ರ ಸಂಚಲನ ಸೃಷ್ಟಿಸಿದ ಮೇಲೆ ಕಾರಾಗೃಹ ಇಲಾಖೆಯಿಂದ ರೂಪಾ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಇದೀಗ ಇದರ ವಿಚಾರಣೆ ನಡೆಸಿದ ಸದನ ಸಮಿತಿ ಎದುರು ಪರಪ್ಪನ ಅಗ್ರಹಾರ ಅಧಿಕಾರಿಗಳು ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ 15 ದಿನಗಳೊಳಗೆ ವರದಿ ತಯಾರಿಸಿಕೊಡುವಂತೆ ಶಾಸಕ ಅಶೋಕ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ