ಮುಂಬೈ: ಮುಂಬೈ ಮಾಜಿ ಡಿಜಿಪಿ ಪರಂಬೀರ್ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪವನ್ನು ತಳ್ಳಿ ಹಾಕಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.
ಅನಿಲ್ ಅಂಬಾನಿ ಮನೆಯಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆದಂಡವಾಗಿರುವ ಮಾಜಿ ಡಿಜಿಪಿ ಪರಂಬೀರ್ ಸಿಂಗ್ ವರ್ಗಾವಣೆಗೆ ಮುನ್ನ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದು ಅನಿಲ್ ದೇಶ್ ಮುಖ್, ಎನ್ ಕೌಂಟರ್ ಸ್ಪಷಲಿಸ್ಟ್ ಸಚಿನ್ ವಾಝೆಗೆ ಪ್ರತೀ ತಿಂಗಳು 100 ಕೋಟಿ ರೂ. ಸಂಗ್ರಹಿಸಿಕೊಡಲು ಒತ್ತಡ ಹೇರುತ್ತಿದ್ದರು ಎಂದು ಆರೋಪ ಮಾಡಿದ್ದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅನಿಲ್ ದೇಶ್ ಮುಖ್ ಇದು ಸತ್ಯಕ್ಕೆ ದೂರವಾದ ಆರೋಪ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರಂಬೀರ್ ಇಂತಹ ಸುಳ್ಳು ಆರೋಪ ಮಾಡಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮೇಲೆ ಆರೋಪ ಮಾಡಿರುವ ಪರಂಬೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.