ನವದೆಹಲಿ : ದೆಹಲಿಯ ಛತ್ತರ್ಪುರದಲ್ಲಿರುವ ಫಾರ್ಮ್ಹೌಸ್ಗಾಗಿ ಹೀರೋ ಮೋಟೋಕಾರ್ಪ್ 1,000 ಕೋಟಿ ರೂ.ಗೂ ಹೆಚ್ಚು,
ಬೋಗಸ್ ಖರ್ಚು ಹಾಗೂ 100 ಕೋಟಿ ರೂ.ಗೂ ಹೆಚ್ಚು ನಗದು ವಹಿವಾಟು ನಡೆಸಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖೆ ವೇಳೆ ಪತ್ತೆ ಮಾಡಿದೆ.
ಹೀರೋ ಮೋಟೋಕಾರ್ಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ತಮ್ಮ ಛತ್ತರ್ಪುರದಲ್ಲಿರುವ ಫಾರ್ಮ್ಹೌಸ್ ಖರೀದಿಗೆ 100 ಕೋಟಿ ರೂ. ಕಪ್ಪು ಹಣವನ್ನು ಪಾವತಿಸಿದ್ದಾರೆ ಎಂದು ಐಟಿ ಇಲಾಖೆ ಬಹಿರಂಗ ಪಡಿಸಿದೆ.
ಇದು ಐಟಿ ಕಾಯ್ದೆಯ ಸೆಕ್ಷನ್ 269 ಎಸ್ಎಸ್ನ ಉಲ್ಲಂಘನೆಯಾಗಿದೆ. ಆದಾಯ ತೆರಿಗೆ(ಐಟಿ) ಇಲಾಖೆ ಮಾರ್ಚ್ 23 ರಂದು ಪವನ್ ಮುಂಜಾಲ್ ಅವರ ನಿವಾಸ ಹಾಗೂ ಹೀರೋ ಕಂಪನಿ ದೆಹಲಿ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಇದು ಮಾರ್ಚ್ 26 ರಂದು ಮುಕ್ತಾಯಗೊಂಡಿತು.