ಮೊದಲ ಪತ್ನಿಗೆ ತಿಳಿಯದಂತೆ ಮತ್ತೊಂದು ವಿವಾಹವಾಗಿದ್ದ ಭೂಪನಿಗೆ, ಇದೀಗ ಇಬ್ಬರ ಹೆಂಡಿರ ಕಾಟದಿಂದ ಬೇಸತ್ತು ಕಂಗಾಲಾಗಿ ಹೋದ ಘಟನೆ ನಡೆದಿದೆ. ಇಬ್ಬರು ಪತ್ನಿಯರಿಗೆ ಪತಿಯ ಕರ್ಮಕಾಂಡ ತಿಳಿದಿದ್ದರಿಂದ ಇದೀಗ ಘನಘೋರ ಯುದ್ಧ ಆರಂಭವಾಗಿದೆ.
ಒಂದು ತಿಂಗಳ ಹಿಂದೆ ಮೊದಲ ಹೆಂಡತಿಯನ್ನು ಕಲ್ಬುರ್ಗಿಗೆ ಕರೆತಂದು ಅಪಾರ್ಟ್ಮೆಂಟ್ವೊಂದರಲ್ಲಿ ಇಟ್ಟಿದ್ದರು. ಈ ವಿಷಯ ಎರಡನೇ ಹೆಂಡತಿಗೆ ತಿಳಿದು ದೊಡ್ಡ ರಾದ್ಧಾಂತ ಮಾಡಿದರು. ಮೊದಲ ಹೆಂಡತಿಯನ್ನ ಬಿಟ್ಟುಬಿಡುವಂತೆ ಒತ್ತಾಯಿಸಿದಳು. ಈ ಹಿನ್ನೆಲೆಯಲ್ಲಿ ಪತಿ, ಮೊದಲ ಹೆಂಡತಿಗೆ ವಿಚ್ಛೇದನ ನೀಡಿದರೆ 10 ಲಕ್ಷ ರೂ. ನೀಡುತ್ತೇನೆ. ವಾಪಸ್ ಹೋಗು ಎಂದು ಒತ್ತಾಯಿಸಿದ್ದಾನೆ.
ಇಬ್ಬರು ಹೆಂಡಿರ ಜತೆಯಲ್ಲಿ 12 ವರ್ಷದಿಂದ ಸಂಸಾರ ನಡೆಸುತ್ತಿದ್ದ ಉಪನ್ಯಾಸಕನ ಗುಟ್ಟು ರಟ್ಟಾಗಿದೆ. ಆರೋಪಿ ಪತಿ ಛತ್ತೀಸ್ಗಢದಲ್ಲಿ ಒಂದು ಸಂಸಾರ ಮತ್ತು ಕಲ್ಬುರ್ಗಿಯಲ್ಲಿ ಒಂದು ಸಂಸಾರವಿಟ್ಟುಕೊಂಡಿದ್ದರು. ಛತ್ತೀಸ್ಗಢದಲ್ಲಿ ಮೊದಲು ಮದುವೆಯಾಗಿದ್ದ ಆರೋಪಿ ಕಲ್ಬುರ್ಗಿಯಲ್ಲಿ ಇನ್ನೊಬ್ಬ ಯುವತಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದರು.
ಆದರೆ ಮೊದಲ ಹೆಂಡತಿ ಛತ್ತೀಸ್ಗಢಕ್ಕೆ ವಾಪಸ್ ತೆರಳಲು ನಿರಾಕರಿಸಿದ್ದಾರೆ ಮತ್ತು ವಿಚ್ಛೇದನವನ್ನೂ ತಳ್ಳಿಹಾಕಿದ್ದಾರೆ. ಶಿವಕುಮಾರ್ ಈಗ ಇಬ್ಬರು ಹೆಂಡಿರ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುವ ಸ್ಥಿತಿಯಲ್ಲಿದ್ದಾರೆ.