ವಿವಾಹದ ಸೆಟ್ ಸುಮಾರು ಎಂಟು ಎಕರೆವರೆಗೆ ವ್ಯಾಪಿಸಿದ್ದು 23 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ. ವಿವಾಹ ಮಂಟಪವನ್ನು ಬಾಹುಬಲಿ ಚಿತ್ರದ ಖ್ಯಾತ ಕಲಾ ನಿರ್ದೇಶಕ ಸಬು ಸಿರಿಲ್ ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇರಳದ ಶ್ರೀಮಂತ ಉದ್ಯಮಿ ಅನಿವಾಸಿ ಭಾರತೀಯ, ತಮ್ಮ ಪುತ್ರಿ ಆರತಿ ಪಿಳ್ಳೈಯ ಹೈಪ್ರೋಫೈಲ್ ವಿವಾಹಕ್ಕಾಗಿ 55 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುತ್ರಿ ಆರತಿ ಪಿಳ್ಳೈ, ಕೊಚ್ಚಿ ಮೂಲದ ಆದಿತ್ಯ ವಿಷ್ಣು ಅವರನ್ನು ಕೇರಳದ ಕೊಲ್ಲಂನಲ್ಲಿ ವಿವಾಹವಾಗಲಿದ್ದಾರೆ. 19,300 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಬಹರೈನ್ ಮೂಲದ ಆರ್‌ಪಿ ಗ್ರೂಪ್ ಮುಖ್ಯಸ್ಥರಾಗಿ ರವಿ ಪಿಳ್ಳೈ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಸ್ಥಾನದ ರಾಯಲ್ ಪ್ಯಾಲೇಸ್ ಮಾದರಿಯಲ್ಲಿ ವಿವಾಹ ಮಂಟದ ವಿನ್ಯಾಸ ಮಾಡಲಾಗಿದ್ದು, ವಿವಾಹ ಮಂಟಪ ಸಿದ್ದಪಡಿಸಲು 75 ದಿನಗಳು ತಗುಲಿವೆ ಎನ್ನಲಾಗಿದೆ. ವಿವಾಹಕ್ಕೆ ಸುಮಾರು 30 ಸಾವಿರ ಅತಿಥಿಗಳು ಆಗಮಿಸಲಿದ್ದು, ಖ್ಯಾತ ಕಲಾವಿದರಾದ ಮಂಜು ವಾರಿಯರ್, ಸೋಭನಾ ಮತ್ತು ಸ್ಟೆಫೆನ್, ಡೆವ್ವಾಸಿ ಕಲಾ ಪ್ರದರ್ಶನ ನೀಡಲಿದ್ದಾರೆ.
ಅತಿಥಿಗಳ ಪಟ್ಟಿಯಲ್ಲಿ ರಾಯಲ್ ಕುಟುಂಬಗಳಾದ ಸೌದಿ ಅರೇಬಿಯಾ, ಕತಾರ್, ಬಹರೈನ್ ಮತ್ತು ಯುಎಇ ಹಾಗೂ ಜಪಾನ್ ಗ್ಯಾಸ್ ಕಾರ್ಪೋರೇಶನ್ ಮತ್ತು ಸಿಯೋಡಾ ಕಾರ್ಪೋರೇಶನ್ ಜಪಾನ್ ಹಾಗೂ ಸಾಮ್‌ಸುಂಗ್ ಗ್ರೂಪ್ ಸಿಇಒಗಳು ಪಾಲ್ಗೊಳ್ಳಲಿದ್ದಾರೆ.
ಕೇರಳದ ಮುಖ್ಯಮಂತ್ರಿ , ಕೇಂದ್ರ ಸಚಿವರು ಮತ್ತು ಚಿತ್ರನಟರಾದ ಮುಮ್ಮಟ್ಟಿ ಮತ್ತು ಮೋಹನ್ ಲಾಲ್ ವಿವಾಹಕ್ಕೆ ಹಾಜರಾಗಲಿದ್ದಾರೆ.