Publish Date: Wed, 24 Aug 2022 (09:17 IST)
Updated Date: Wed, 24 Aug 2022 (09:47 IST)
ಮಧ್ಯಪ್ರದೇಶ : ಮಾಂಸದೂಟ ತಿನ್ನುವ ಆಸೆಯಾಗಿ ಮೇಕೆ ಕತ್ತರಿಸುವ ಕನಸು ಕಂಡ ವ್ಯಕ್ತಿ, ನಿಜವಾಗಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.
ಘಾನಾದ ಅಸ್ಸಿನ್ ಫೋಸು ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋಫಿ ಅಟ್ಟಾ ಎಂಬ ವ್ಯಕ್ತಿ ನಿದ್ರೆಯಿಂದ ಎಚ್ಚರವಾದಾಗ ತನ್ನ ಮರ್ಮಾಂಗ ಕತ್ತರಿಸಿಕೊಂಡಿರುವುದನ್ನು ನೋಡಿದ್ದಾನೆ. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಧ್ಯಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಾಳು ಕೋಫಿ ಅಟ್ಟಾ ಸಂಬಂಧಿಕರು ಹಣ ಸಂಗ್ರಹಿಸುತ್ತಿದ್ದಾರೆ.
ನಾನು ನಿದ್ರಿಸಿದ್ದಾಗ ಕುರ್ಚಿಯಲ್ಲಿ ಕುಳಿತಿದ್ದೆ. ನಾನು ಮೇಕೆಯನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ಆದರೆ ನನ್ನ ಜನನಾಂಗಕ್ಕೆ ಹೇಗೆ ಚಾಕು ಹಾಕಿಕೊಂಡೆ ಎಂಬುದರ ಬಗ್ಗೆ ಯಾವ ನೆನಪೂ ಇಲ್ಲ ಎಂದು ಹೇಳಿಕೊಂಡಿದ್ದಾನೆ.
Ramya kosira
Publish Date: Wed, 24 Aug 2022 (09:17 IST)
Updated Date: Wed, 24 Aug 2022 (09:47 IST)