Publish Date: Wed, 25 May 2022 (16:42 IST)
Updated Date: Wed, 25 May 2022 (16:44 IST)
ವಾರಣಸಿಯ ಗ್ಯಾನ್ ವಾಪಿ ಮಸೀದಿ-ಮಂದಿರ ವಿವಾದ ಕುರಿತ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತ್ವರಿತ ನ್ಯಾಯಾಲಕ್ಕೆ ವರ್ಗ ಮಾಡಿದೆ.
ವಾರಣಾಸಿ ೩ನೇ ಸೆಷನ್ಸ್ ನ್ಯಾಯಾಲಯ ಬುಧವಾರ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಕ್ಕೆ ವರ್ಗಾಯಿಸಿದ್ದು, ಪ್ರತಿದಿನ ವಿಚಾರಣೆ ನಡೆಸಿ ಶೀಘ್ರ ತೀರ್ಪು ನೀಡಬೇಕು ಎಂದು ಸೂಚಿಸಿದೆ.
ಗ್ಯಾನ್ ವಾಪಿ ಮಂದಿರ ಮತ್ತು ಮಸೀದಿ ವಿವಾದ ಕುರಿತು ಮೇ ೩೦ರಿಂದ ತ್ವರಿತ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ.