ಚೆನ್ನೈ: ದೇಶದಲ್ಲಿ ತೈಲ ಬೆಲೆ ಏರಿಕೆ ಕುರಿತು ಹಲವು ಜೋಕ್ ಗಳೂ ಹರಿದಾಡುತ್ತಿವೆ. ಆದರೆ ಅಂತಹ ಜೋಕ್ ನ್ನು ಇದೀಗ ತಮಿಳುನಾಡಿನಲ್ಲಿ ಸ್ನೇಹಿತರ ಗುಂಪೊಂದು ನಿಜ ಮಾಡಿದೆ.
ತಮಿಳುನಾಡಿನ ಕಡಲೂರ್ ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನ ಸ್ನೇಹತಿರು ಮದುವೆ ಉಡುಗೊರೆಯಾಗಿ 5 ಲೀ. ಪೆಟ್ರೋಲ್ ನೀಡಿದ್ದಾರೆ!
ಮದುವೆ ಮನೆಗೆ ಬಂದಿದ್ದ ಸ್ನೇಹಿತರ ಗುಂಪು ವರನಿಗೆ 5 ಲೀ. ಪೆಟ್ರೋಲ್ ಕ್ಯಾನ್ ಉಡುಗೊರೆಯಾಗಿ ನೀಡುತ್ತಿದ್ದಂತೆ ನೆರೆದಿದ್ದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ತಮಿಳುನಾಡಿನಲ್ಲಿ ಸದ್ಯಕ್ಕೆ ಪೆಟ್ರೋಲ್ ಬೆಲೆ 85 ರೂ. ಇದೆ. ಇದನ್ನೇ ವಿಡಂಬನಾತ್ಮಕವಾಗಿ ಈ ಸ್ನೇಹಿತರು ಉಡುಗೊರೆ ನೀಡುವ ಮೂಲಕ ತೋರಿಸಿಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.