ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರಿಗೆ ಒಂದು ಅಮೂಲ್ಯವಾದ ಉಡುಗೊರೆಯೊಂದು ಅವರ ಗೆಳತಿಯಿಂದ ಸಿಕ್ಕಿದೆಯಂತೆ.
ಹೌದು. ನಟಿ ಮೇಘನಾ ರಾಜ್ ಅವರಿಗೆ ವಿಷ್ಣುವರ್ಧನ್ ಪುತ್ರಿ ಕೀರ್ತಿ ವಾಚ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಆದರೆ ಈ ವಾಚ್ ಸಾಮಾನ್ಯವಾದುದಲ್ಲ. ಅದು ಕನ್ನಡ ಸಿನಿಮಾರಂಗ ಕಂಡ ಅದ್ಬುತ ಕಲಾವಿದ ಸಾಹಸಸಿಂಹ ವಿಷ್ಣು ವರ್ಧನ್ ಅವರ ಕೈ ನಲ್ಲಿದ್ದ ವಾಚ್ ಅಂತೆ.
ಬಹುಕಾಲದ ಸ್ನೇಹಿತೆಯಾದ ನಟಿ ಮೇಘನಾ ರಾಜ್ ಅವರಿಗೆ ಈ ವಾಚ್ ನ್ನು ವಿಷ್ಣುವರ್ಧನ್ ಪುತ್ರಿ ಕೀರ್ತಿ ತಮ್ಮ ಸ್ನೇಹದ ಕಾಣಿಕೆಯಾಗಿ ನೀಡಿದ್ದಾರಂತೆ. ಈ ವಿಚಾರವನ್ನು ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.