Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಿಹಾರ: ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಅಪರಾಧ ಎಂದು ಗೊತ್ತಿದ್ದರೂ ಎಷ್ಟೋ ಶಿಕ್ಷಿತ ಕುಟುಂಬದವರೇ ವರದಕ್ಷಿಣೆಗಾಗಿ ಬೇಡಿಕೆಯಿಡುವುದು ನಡೆಯುತ್ತಲೇ ಇದೆ.
ಇದೀಗ ಅಂತಹದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ವರ ಮಹಾಶಯನೊಬ್ಬ ಮದುವೆ ಮಂಟಪದಲ್ಲೇ ವರದಕ್ಷಿಣೆ ಕೊಡದೇ ಮದುವೆಯಾಗಲ್ಲ ಎಂದು ಮದುವೆ ಮುರಿದುಕೊಂಡಿದ್ದಾನೆ. ವರದಕ್ಷಿಣೆ ತೆಗೆದುಕೊಳ್ಳುವುದರಲ್ಲಿ ತಪ್ಪೇನು ಎಂದು ಬೇರೆ ಆತ ಹೆಣ್ಣಿನ ಮನೆಯವರ ಜೊತೆ ವಾದಿಸುತ್ತಾನೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಪರ್ಯಾಸವೆಂದರೆ ವರನ ತಾಯಿ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕಿ. ಆದರೂ ಮಗನದ್ದು ಮಾತ್ರ ದುರಾಸೆ ಬುದ್ಧಿ ಎಂಬುದು ವಿಪರ್ಯಾಸ.