ನವದೆಹಲಿ : ನವದೆಹಲಿ : ಇಂದು ದೇಶಾದ್ಯಂತ 75 ನೇ ಗಣರಾಜ್ಯೋತ್ಸವವನ್ನು ಸಂಭ್ರಮಕ್ಕೆ ಗೂಗಲ್ ಸಂಸ್ಥೆಯು ವಿಶೇಷ ಡೂಡಲ್ ರಚಿಸುವ ಮೂಲಕ ಭಾರತಕ್ಕೆ ಗೌರವ ಸಲ್ಲಿಸಿದೆ.ಗಣರಾಜ್ಯೋತ್ಸವದ ಆಕರ್ಷಕ ಪಥಸಂಚಲನವು ಕಾಲದಿಂದ ಕಾಲಕ್ಕೆ ಹೊಂದಿರುವ ಬದಲಾವಣೆಯನ್ನು ಈ ಡೂಡಲ್ ಸಾಂಕೇತಿಕವಾಗಿ ತಿಳಿಸಿದೆ.
ಆರಂಭದಲ್ಲಿ ಜನರು ಕಪ್ಪು ಬಿಳುಪು ಟಿವಿ ಮುಖಾಂತರ ಪಥಸಂಚಲನ ವೀಕ್ಷಿಸುತ್ತಿದ್ದರು. ಬಳಿಕ ಜನರು ಬಣ್ಣದ ಟಿವಿ ಮೂಲಕ ವೀಕ್ಷಿಸುತ್ತಿದ್ದರು. ಈಗ ಅಂಗೈನಲ್ಲಿರುವ ಮೊಬೈಲ್ ಮೂಲಕವೇ ಗಣರಾಜ್ಯೋತ್ಸವ ಪಥ ಸಂಚಲನ ವೀಕ್ಷಿಸಬಹುದಾಗಿದೆ. ಇದನ್ನೇ ಗೂಗಲ್ ತನ್ನ ಡೂಡಲ್ ಚಿತ್ರದ ಮೂಲಕ ಸೂಚಿಸಿದೆ.