ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದೆ.ಮನುಷ್ಯರ ಜೊತೆ ಪ್ರಾಣಿ ಪಕ್ಷಿಗಳೂ ಸಹ ನೀರಿಗಾಗಿ ಪರದಾಡುತ್ತಿವೆ. ನೀರಿಗಾಗಿ ಕೊಡವೊಂದಕ್ಕ ಮುಖ ಸಿಲುಕಿಸಿಕೊಂಡು ಮೇಕೆ ಒದ್ದಾಡಿದ ಘಟನೆ ಗದಗ ಶಿರಹಟ್ಟಿ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ನಡೆದಿದೆ.
ಮೇಕೆ ಕೊಡದಲ್ಲಿ ಮುಖ ಸಿಲುಕಿಸಿಕೊಂಡು ಒದ್ದಾಡುತ್ತಿರುವ ದೃಶ್ಯವನ್ನ ಮೊಬೈಲ್`ಗಳಲ್ಲಿ ಸೆರೆ ಹಿಡಿಯಲಾಗಿದೆ. ಮೇಕೆ ಒದ್ದಾಡುತ್ತಿದ್ದದ್ದನ್ನ ಗಮನಿಸಿದ ವಿರೂಪಾಕ್ಷ ಎಂಬುವವರು ಮೇಕೆಯನ್ನ ರಕ್ಷಿಸಿದ್ದಾರೆ. ಜಿಲ್ಲೆಯಲ್ಲಿನ ನೀರಿನ ಹಾಹಾಕಾರಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ಕೊಡದಿಂದ ಹೊರ ಬಂದ ಕೂಡಲೇ ಪಾಪ ಮೇಕೆ ಬದುಕಿದೆಯಾ ಬಡ ಜೀವ ಎಂಬಂತೆ ಓಡಿಹೋಗಿದೆ.
ರಾಜ್ಯದ ನೀರಿನ ಹಾಹಾಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜನ-ಜಾನುವಾರುಗಳು ನೀರಿಗಾಗಿ ಪರದಾಡುತ್ತಿವೆ. ಹನಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಆದಷ್ಟು ಬೇಗ ಮಳೆ ಬರದಿದ್ದರೆ ಜನರ ಪಾಡು ದೇವರೇ ಬಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ