ಗೋವಾ : ಗೋವಾ ಸರ್ಕಾರ ಆರು ತಿಂಗಳ ಕಾಲ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿದೆ. ಇದರಿಂದ ಮೀನುಗಾರರಿಗೆ ಹೊಡೆತ ಬಿದ್ದಂತಾಗಿದೆ.
ಹೊರರಾಜ್ಯದಿಂದ ಸರಬರಾಜಾಗುತ್ತಿರುವ ಮೀನಿನಲ್ಲಿ ವಿಷಕಾರಿ ಫಾರ್ಮಾಲಿನ್ ರಾಸಾಯನಿಕ ಅಂಶವಿದೆ ಎಂಬ ಕಾರಣದಿಂದ ಗೋವಾ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಕಳೆದ ಆಗಸ್ಟ್‌ನಲ್ಲಿಯೂ ಕೂಡ ಗೋವಾ ಸರ್ಕಾರ ಇದೇ ಕಾರಣಕ್ಕೆ ಹೊರರಾಜ್ಯದ ಮೀನು ಆಮದಿಗೆ ನಿಷೇಧ ಹೇರಿತ್ತು. ಬಳಿಕ ಹಿಂಪಡೆದಿತ್ತು. ಆದರೆ ಇದೀಗ ಆರು ತಿಂಗಳ ಕಾಲ ಮತ್ತೆ ನಿಷೇಧ ಜಾರಿಗೊಳಿಸುತ್ತಿದೆ.
ನ.12ರ ಸೋಮವಾರದಿಂದ ಈ ನಿಷೇಧ ಜಾರಿಗೆ ಬರಲಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಮೀನುಗಾರರ ಮೇಲೆ ಇದರಿಂದ ಹೊಡೆತ ಬೀಳಲಿದೆ. ಮೀನಿನ ಗುಣಮಟ್ಟ ಪರೀಕ್ಷೆಗಾಗಿ ಗೋವಾದಲ್ಲಿ ಆರು ತಿಂಗಳಲ್ಲಿ ಪ್ರಯೋಗಾಲಯವೊಂದನ್ನು ತೆರೆಯಲಾಗುತ್ತದೆ. ಅಲ್ಲಿವರೆಗೂ ಹೊರರಾಜ್ಯದ ಮೀನುಗಳಿಗೆ ಅವಕಾಶವಿಲ್ಲ. ಆನಂತರ ಆಮದು ಮಾಡಿಕೊಳ್ಳಲಾಗುವುದು ಎಂದು ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಶನಿವಾರ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.