Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಯಾಪ್ಟರ್ ನಿಂದ ಬಂದು ಮೀನು ಖರೀದಿಸಿದ್ರು !

ಕ್ಯಾಪ್ಟರ್ ನಿಂದ ಬಂದು ಮೀನು ಖರೀದಿಸಿದ್ರು !
ಉತ್ತರ ಕನ್ನಡ , ಬುಧವಾರ, 31 ಅಕ್ಟೋಬರ್ 2018 (14:15 IST)
ಅರೇ ಇದೇನಪ್ಪ ಒಂದು 500 ರಿಂದ  1000 ರೂಪಾಯಿ ಮೌಲ್ಯದ ಮೀನಿಗಾಗಿ ಹೆಲಿಕಾಪ್ಟರ್ ನಲ್ಲಿ ಬಂದು ಲಕ್ಷಗಟ್ಟಲೇ ಖರ್ಚು ಮಾಡಿ ಕೊಂಡುಕೊಳ್ತಾರಾ ಅಂತ ಹೌಹಾರಬೇಡಿ. ಇದು ನಮ್ಮ ಭಾರತೀಯ ನೌಕದಳದವ ದರ್ಬಾರ್.  

ಮಲ್ಪೆ ಭಾಗದಿಂದ ಗೋವಾ ಗಡಿಯಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿರುವಾಗ ಏಕಾ ಏಕಿ ಬೋಟ್ ಬಳಿ ಹೆಲಿಕಾಪ್ಟರ್ ತಂದ ನೌಕಾ ಸಿಬ್ಬಂದಿಯು ಮೀನು ಕೊಡುವಂತೆ ಸನ್ನೆ ಮಾಡಿದ್ದಾರೆ. ಬೋಟ್ ನಲ್ಲಿದ್ದ ಮೀನುಗಾರರಿಗೆ ಹೇಳಿದ್ದಾರೆ. ಈ ಘಟನೆ  ನಡರದಿರುವುದು ಕಾರವಾರ ಮತ್ತು ಗೋವಾ ಗಡಿ ಭಾಗದ ಅರಬ್ಬಿ ಸಮುದ್ರದಲ್ಲಿ. ಮೀನಿನ ರುಚಿ ಹತ್ತಿದವರಿಗೆ ಮೀನು ತಿನ್ನಲು ಎಂತೆಂತವರು ಏನೇನು ಮಾಡುತ್ತಾರೆ ಮೀನಿಗಾಗಿ ಅಂದ್ರೆ ನಿಜವಾಗಿ ಶಾಕ್ ಆಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋವಾ ಗಡಿಯಲ್ಲಿ ಮಲ್ಪೆಯ ಬೋಟ್ ಒಂದು ಮೀನು ಬೇಟೆ ಮಾಡಿ ಕಾರವಾರದ ಕಡೆ ಹೊಗುತ್ತಿರುವಾಗ ಭಾರತೀಯ ನೌಕಾದಳದ ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕ ಬೋಟ್ ಬಳಿ ಬಂದು ಮೀನುನ್ನು ಪುಕ್ಕಟೆ ಪಡೆದು ಹೋಗಿದ್ದಾರೆ. ಹೀಗೆ ಬೋಟ್ ಬಳಿ ಬಂದು ಮೀನಿಗಾಗಿ ಬೋಟ್ ನವರಿಗೆ ಸನ್ನೆ ಮಾಡಿ ಮೀನುಕೊಡುವಂತೆ ಬೋಟ್ ಗೆ ಹಗ್ಗದ ಮೂಲಕ ಕವರ್ ನೀಡಿ ಮೀನು ಪಡೆಯುತ್ತಿರುವ ದೃಶ್ಯವನ್ನು ಆ ಬೋಟ್ ನೊಂದಿಗಿದ್ದ ಮತ್ತೊಂದು ಬೋಟ್ ನವರು ರೆಕಾರ್ಡ್ ಮಾಡಿದ್ದಾರೆ.

ಈಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ   ಸಾಕಷ್ಟು ವೈರಲ್ ಆಗುತ್ತಿದ್ದು,  ಗಡಿ ಕಾಯುವ ನೌಕಾದಳ ಸಿಬ್ಬಂದಿಗಳ  ಈ ವರ್ತನೆಗೆ ಟೀಕೆ ಸಹ ವ್ಯಕ್ತವಾಗಿದೆ.  ನಂತರ ಹೆಲಿಕಾಪ್ಟರ್ ನಿಂದ ಬೋಟ್ ಗೆ ಹಗ್ಗದ ಮೂಲಕ ಕವರ್ ನನ್ನು ಇಳಿ ಬಿಟ್ಟು ಮೀನು ತೆಗೆದುಕೊಂಡು ಮರಳಿದ್ದಾರೆ. 

ಹೀಗೆ ಹೆಲಿಕಾಪ್ಟರ್ ಮೂಲಕ ಮೀನನ್ನು ಪಡೆಯುತ್ತಿರುವ ದೃಶ್ಯ ವನ್ನು ಪಕ್ಕದಲ್ಲೇ ಇದ್ದ ಇನ್ನೊಂದು ಬೋಟ್ ನವರು ರೆಕಾರ್ಡ್ ಮಾಡಿದ್ದಾರೆ. ಈಗ ಈ ವೀಡಿಯೋ ಸಕತ್ ವೈರಲ್ ಆಗುತ್ತಿದ್ದು, ದೇಶದ ಭದ್ರತೆಗೆ ಬಳಸಬೇಕಾದ ಹೆಲಿಕಾಪ್ಟರ್ ನನ್ನು ಹೀಗೆ ತಮ್ಮ ಸ್ವಂತಕ್ಕೆ ಬಳಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಹೇಳಿದ್ದೇನು?