Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ಏ ದಿಲ್ ಹೈ ಮುಷ್ಕಿಲ್' ಬಹಿಷ್ಕರಿಸಲು ಕರೆ ನೀಡಿದ ಡಿಜಿಪಿ

'ಏ ದಿಲ್ ಹೈ ಮುಷ್ಕಿಲ್' ಬಹಿಷ್ಕರಿಸಲು ಕರೆ ನೀಡಿದ ಡಿಜಿಪಿ
ಪಣಜಿ , ಬುಧವಾರ, 2 ನವೆಂಬರ್ 2016 (15:09 IST)
ಕರಣ್ ಜೋಹರ್ ನಿರ್ದೇಶಿಸಿರುವ 'ಏ ದಿಲ್ ಹೈ ಮುಷ್ಕಿಲ್' ಚಿತ್ರವನ್ನು ವೀಕ್ಷಿಸಬಾರದೆಂದು ಗೋವಾದ ಪೊಲೀಸ್ ನಿರ್ದೇಶಕ ಮುಕೇಶ್ ಚಂದರ್ ಮನವಿ ಮಾಡಿಕೊಂಡಿದ್ದಾರೆ. 

 
ಸಿನಿಮಾದಲ್ಲಿ ಖ್ಯಾತ ಸಂಗೀತಗಾರ ಮಹಮ್ಮದ್ ರಫಿಯನ್ನು ಅವಮಾನಿಸಲಾಗಿದ್ದು, ಇದನ್ನು ವಿರೋಧಿಸಿ ಯಾರು ಕೂಡ ಚಿತ್ರವನ್ನು ನೋಡಬಾರೆಂದು ಅವರು ಟ್ವೀಟ್ ಮಾಡಿದ್ದಾರೆ. 
 
ರಫಿ ಹಾಡೋದಕ್ಕಿಂತ ಹೆಚ್ಚು ಅಳುತ್ತಿದ್ದರು ಎಂಬ ಸಂಭಾಷಣೆ ಚಿತ್ರದಲ್ಲಿದ್ದು ಇದು ಮಹೋನ್ನತ ಗಾಯಕನಿಗಾದ ಅವಮಾನ ಎಂದು ಡಿಜಿಪಿ ಆಕ್ಷೇಪಿಸಿದ್ದಾರೆ.
 
ಚಿತ್ರದ ನಾಯಕಿ ಅನುಷ್ಕಾ ಶರ್ಮಾ, ನಾಯಕ ರಣಬೀರ್ ಕಪೂರ್ ಜತೆ  ಮೊಹಮ್ಮದ್ ರಫಿ? ಅವರು ಹಾಡೋದಕ್ಕಿಂತ ಹೆಚ್ಚು ಅಳುತ್ತಿದ್ದರಲ್ಲವೇ? ಎಂದು ಹೇಳುತ್ತಿರುವುದು ಸಿನಿಮಾದಲ್ಲಿ ಕಂಡು ಬಂದಿದೆ. 
 
ರಫಿ ಎಷ್ಟು ದೊಡ್ಡ ಗಾಯಕರೆಂಬುದು ನಿಮಗೆ ಗೊತ್ತು, ಅದಕ್ಕೆ ಯಾರು ಕೂಡ ಪ್ರಮಾಣಪತ್ರ ನೀಡಬೇಕಿಲ್ಲ. ನೀವು ರಫಿ ಅಭಿಮಾನಿಯಾಗಿದ್ದರೆ ಈ ಸಿನಿಮಾ ನೋಡಬೇಡಿ ಎಂದು ಡಿಜಿಪಿ ಮನವಿ ಮಾಡಿಕೊಂಡಿದ್ದಾರೆ.
 
ರಫಿ ಪರಿವಾರ ಸಹ ಈ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದೆ. 
 
ಬಿಡುಗಡೆಗೂ ಮೊದಲಿನಿಂದಲೂ ಈ ಸಿನಿಮಾ ವಿವಾದಕ್ಕೊಳಗಾಗುತ್ತಿದೆ. ಪಾಕ್ ನಟ ಫಾವದ್ ಖಾನ್. ಪಾಕಿಸ್ತಾನಿ ನಟ ಫಾವದ್‌ ಖಾನ್‌ ನಟಿಸಿದ್ದಾರೆಂದು ಈ ಚಿತ್ರದ ಬಿಡುಗಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮತ್ತೀಗ ಮತ್ತೊಂದು ವಿವಾದಕ್ಕೆ ಸಿಕ್ಕಿ ಹಾಕಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದರ ಸಂಬಳದಲ್ಲಿ 100% ಏರಿಕೆ