Publish Date: Fri, 19 Aug 2022 (09:41 IST)
Updated Date: Fri, 19 Aug 2022 (10:43 IST)
ಲಕ್ನೋ : ಜ್ಞಾನವಾಪಿ ಮಸೀದಿ ಹಾಗೂ ಶೃಂಗಾರ ಗೌರಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ 5 ಮಹಿಳೆಯರಲ್ಲಿ ಒಬ್ಬರ ಪತಿಗೆ ಅರ್ಜಿಯನ್ನು ಹಿಂಪಡೆಯುವಂತೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಯ ಹಿಂಭಾಗದಲ್ಲಿರುವ ಶೃಂಗಾರ ಗೌರಿ ದೇವರಿಗೆ ನಿತ್ಯ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೋರಿ ಐವರು ಮಹಿಳೆಯರು ಸ್ಥಳೀಯ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ನಂಬರ್ನಿಂದ ಹಲವಾರು ಬಾರಿ ಅರ್ಜಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಬೆದರಿಕೆ ಕರೆಗಳು ಬಂದಿವೆ. ಆದರೆ ನಾವು ಯಾವುದೇ ಬೆದರಿಕೆಗೂ ಹೆದರುವುದಿಲ್ಲ ಎಂದು ಸೋಹನ್ ಲಾಲ್ ಆರ್ಯ ತಿಳಿಸಿದ್ದಾರೆ.