Publish Date: Fri, 04 Mar 2022 (09:50 IST)
Updated Date: Fri, 04 Mar 2022 (09:56 IST)
ಅಹಮ್ಮದಾಬಾದ್: ಊಟದ ವಿಚಾರಕ್ಕಾಗಿ ಗರ್ಲ್ ಫ್ರೆಂಡ್ ಜೊತೆ ಕಿತ್ತಾಡಿದ ಪ್ರಿಯಕರ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ.
ಪ್ರೇಮಿಗಳು ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ಮಧ್ಯರಾತ್ರಿ ಬಂದು ಪ್ರಿಯಕರ ಊಟ ಕೇಳಿದ್ದ. ಆದರೆ ಯುವತಿ ಊಟ ಕೊಡಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ದುಪಟ್ಟಾದಿಂದ ಯುವತಿಯನ್ನು ಕಟ್ಟಿ ಹಾಕಿ ಪ್ರಿಯಕರ ಹಲ್ಲೆ ನಡೆಸಿದ್ದಾನೆ. ಬಳಿಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮನೆಯಿಂದ ಹೊರಹೋಗಿದ್ದಾನೆ. ಆ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.ಇದೀಗ ಯುವಕನ ಮೇಲೆ ಪ್ರಕರಣ ದಾಖಲಾಗಿದೆ.