ಬಾಲಕಿಯೊಬ್ಬಳು ಪಾರ್ಕ್ನಲ್ಲಿ ತನ್ನ ಸ್ನೇಹಿತೆಯ ಜೊತೆ ಕೂತಿದ್ದಳು. ಅಲ್ಲಿ ಮೂವರು ಯುವಕರು ಬಂದು, ಒತ್ತಾಯ ಪೂರ್ವಕವಾಗಿ ಚಾಕು ತೋರಿಸಿ ಬಾಲಕಿಯನ್ನು ರೈಲ್ವೆ ಹಳಿ ಪಕ್ಕದ ಪೊದೆಯೊಳಗಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಐವರು ಯುವಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ವರದಿಯಾಗಿದೆ.
ಮನೆಗೆ ತಲುಪಿದ ಬಾಲಕಿ ನಡೆದ ಘಟನೆಯನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ. ಕುಟುಂಬದವರು ಪೋಲಿಸರಿಗೆ ಈ ವಿಷಯವನ್ನು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಿಲ್ಲುಂತೆ ಕಂಡು ಬರುತ್ತಿಲ್ಲ. ಮಧುವಿಹಾರ ಕ್ಷೇತ್ರದಲ್ಲಿರುವ 16 ವರ್ಷದ ಬಾಲಕಿಯ ಮೇಲೆ 5 ಜನ ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೋಲಿಸರು 20 ವರ್ಷ ವಯಸ್ಸಿನ ಅನಿಲ್ ಎನ್ನುವ ಯುವಕನ್ನು ಬಂಧಿಸಿಇ ವಿಚಾರಣೆ ನಡೆಸಿದ್ದಾರೆ. ಘಟನೆಯಲ್ಲಿ ಭಾಗಿಯಾದ ಇತರ ಯುವಕರು ಪರಾರಿಯಾಗಿದ್ದು, ಇವರ ಬಲೆಗೆ ಪೋಲಿಸರು ಜಾಲ ಬೀಸಿದ್ದಾರೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.