Publish Date: Sat, 28 May 2022 (10:21 IST)
Updated Date: Sat, 28 May 2022 (09:22 IST)
ಲಕ್ನೋ: ಬ್ಯಾಂಕ್ ಸಾಲ ಪಡೆಯಲು ನಕಲಿ ದಾಖಲೆಗಳನ್ನು ನೀಡಿ ವಂಚಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ.
20 ಲಕ್ಷ ರೂ.ಗಳ ನಾಲ್ಕು ಲೋನ್ ಪಾಸಾಗಿತ್ತು. ಆದರೆ ಖದೀಮರ ಖಾತೆಗೆ ಹಣ ವರ್ಗಾವಣೆಯಾಗುವ ಮುನ್ನವೇ ಸಂಚು ಬಯಲಾಗಿದ್ದು ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟು ನಾಲ್ಕು ಮಂದಿ ಆರೋಪಿಗಳಿದ್ದು ಈ ಪೈಕಿ ಇದೀಗ ಮೂವರನ್ನು ಬಂಧಿಸಲಾಗಿದ್ದು, ಓರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.