Webdunia - Bharat's app for daily news and videos

Install App

ತಮಿಳುನಾಡಿನ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಮಾರಿ ಅನಂತನ್ ನಿಧನ, ಇವರ ಪುತ್ರಿ ತೆಲಂಗಾಣದ ಮಾಜಿ ರಾಜ್ಯಪಾಲೆ

Sampriya
ಬುಧವಾರ, 9 ಏಪ್ರಿಲ್ 2025 (16:04 IST)
photo Courtesy x
ತಮಿಳುನಾಡು:  ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಕುಮಾರಿ ಅನಂತನ್ (93) ಬುಧವಾರ (ಏಪ್ರಿಲ್ 9, 2025) ಮುಂಜಾನೆ ಚೆನ್ನೈನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರತಿಪಾದಿಸುತ್ತಾ, ರಾಜ್ಯದ ನೆಲ, ಭಾಷೆ, ಸಂಸ್ಕೃತಿ ಪರ ಹೋರಾಟ ನಡೆಸಿದ್ದರು.

ಇನ್ನೂ ಸಂಸತ್ತಿನ ಸಭಾಂಗಣದಲ್ಲಿ ತಮಿಳು ಭಾಷೆ ಬಳಸಬೇಕೆಂದು ಹೋರಾಟ ಮಾಡಿ, ಎಂದೆದಿಗೂ ನೆನಪಿನಲ್ಲಿ ಉಳಿಯುವ ಕೆಲಸವನ್ನು ಮಾಡಿದರು.

ಅನಂತನ್ ಅವರಿಗೆ ಒಬ್ಬ ಮಗ ಮತ್ತು ನಾಲ್ವರು ಹೆಣ್ಣುಮಕ್ಕಳಿದ್ದಾರೆ, ಅವರಲ್ಲಿ ಹಿರಿಯ ಬಿಜೆಪಿ ನಾಯಕಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಸೇರಿದ್ದಾರೆ.

1977 ರಲ್ಲಿ, ಅವರು ನಾಗರಕೋಯಿಲ್‌ನಿಂದ ಜನತಾ ಅಥವಾ ಕಾಂಗ್ರೆಸ್ (ಸಂಘಟನೆ) ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾದರು.

ಅನಂತನ್ ಅವರು ನಾಲ್ಕು ಬಾರಿ ತಮಿಳುನಾಡು ವಿಧಾನಸಭೆಯ ಸದಸ್ಯರಾಗಿದ್ದರು ಮತ್ತು ತಮಿಳಿನಲ್ಲಿ ಪ್ರಖ್ಯಾತ ವಾಗ್ಮಿಯಾಗಿದ್ದರು. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಸಾಲಿಗ್ರಾಮದಲ್ಲಿರುವ ಅವರ ಮಗಳ ಮನೆಯಲ್ಲಿ ಇರಿಸಲಾಗುವುದು.

ತಮ್ಮ ತಂದೆಯ ನಿಧನದ ಕುರಿತು ಸೌಂದರರಾಜನ್ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ. X ನಲ್ಲಿ ಪೋಸ್ಟ್ ಮಾಡಿರುವ ಅವರು, ತಮಿಳುನಾಡು ರಾಜಕೀಯದಲ್ಲಿ ಅನಂತನ್ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ದೇವೇಗೌಡರಿಗೆ 92ನೇ ಜನ್ಮದಿನದ ಸಂಭ್ರಮ: ಮೋದಿ, ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

ಮುಂದಿನ ಸುದ್ದಿ