ಸಮಾಜವಾದಿ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಸಂಸದ ಅಮರ್ ಸಿಂಗ್ ನಿಧನರಾಗಿದ್ದಾರೆ.
64 ವಯಸ್ಸಿನ ಸಿಂಗ್ ಅವರು ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.
ಅಮರ್ ಸಿಂಗ್ ಹಲವಾರು ವರ್ಷಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣ ದೀರ್ಘಕಾಲದವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್ ತಿಂಗಳಲ್ಲೇ ಸಿಂಗಾಪುರದ ಆಸ್ಪತ್ರೆಗೆ ದಾಖಲಾಗಿದ್ದರು.
1996 ರಲ್ಲಿ ಅಮರ್ ಸಿಂಗ್ ಮೊದಲ ಬಾರಿಗೆ ರಾಜ್ಯಸಭೆಗೆ ಉತ್ತರಪ್ರದೇಶದಿಂದ ಆಯ್ಕೆಯಾದರು. 2003 ರ ಜೂನ್ನಲ್ಲಿ ರಾಜ್ಯಸಭೆಗೆ ಪುನರಾಯ್ಕೆಯಾದ ಅವರು, 2016 ರಲ್ಲಿ ಮತ್ತೆ ಉತ್ತರ ಪ್ರದೇಶದಿಂದ ಚುನಾಯಿತರಾದರು. ಅವರ ದಶಕಗಳ ರಾಜಕೀಯ ಜೀವನದಲ್ಲಿ, ಅಮರ್ ಸಿಂಗ್ ಹಲವಾರು ಸಂಸದೀಯ ಸಮಿತಿಗಳ ಭಾಗವಾಗಿದ್ದರು.