Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಫ್ಗನ್‌ನಲ್ಲಿ ದಿಢೀರ್ ಪ್ರವಾಹ: ಕೊಚ್ಚಿಹೋದ ಸಾವಿರಾರು ಮನೆಗಳು, 50 ಮಂದಿ ಮೃತ

ಅಫ್ಗನ್‌ನಲ್ಲಿ ದಿಢೀರ್ ಪ್ರವಾಹ: ಕೊಚ್ಚಿಹೋದ ಸಾವಿರಾರು ಮನೆಗಳು, 50 ಮಂದಿ ಮೃತ

Sampriya

ಕಾಬೂಲ್ , ಶನಿವಾರ, 18 ಮೇ 2024 (14:25 IST)
Photo Courtesy X
ಕಾಬೂಲ್: ಅಫ್ಗಾನಿಸ್ತಾನದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭಾರೀ ಜೀವಹಾನಿಯಾಗಿದೆ. ದಿಢೀರ್ ಪ್ರವಾಹಕ್ಕೆ ಸಿಲುಕಿ 50 ಜನ ಮೃತಪಟ್ಟಿದ್ದಾರೆ.

ಮೃತರು ಘೋರ್‌ ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ. ಶುಕ್ರವಾರ ರಾತ್ರಿ ದಿಢೀರನೆ ಪ್ರವಾಹ ಉಂಟಾಗಿತ್ತು. ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರವಾಹದಿಂದಾಗಿ 2 ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ನಾಶವಾಗಿವೆ. ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ನೂರಾರು ಹಸುಗಳು ಮೃತಪಟ್ಟಿವೆ. ನೂರಾರು ಹೆಕ್ಟೇರ್‌ ಕೃಷಿ ಜಮೀನು, ಸೇತುವೆಗಳು ಹಾಗೂ ಕಲ್ವರ್ಟ್‌ಗಳು ನಾಶವಾಗಿವೆ. ನೂರಾರು ಮರಗಳು ಧರೆಗುರುಳಿವೆ. ರಸ್ತೆಗಳು ಸಂಪೂರ್ಣ ಕಿತ್ತುಹೋಗಿವೆ.

ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಉತ್ತರದ ಬಾಘ್ಲನ್‌ ಪ್ರಾಂತ್ಯದಲ್ಲಿ ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ದೂರು