Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸಿದ ವಿವಾಹಿತ ಮಗಳನ್ನು ಹುಲ್ಲು ಕತ್ತರಿಸುವ ಕಟ್ಟರ್‌ನಿಂದ ಸ್ವಂತ ತಂದೆಯೇ ಕತ್ತರಿಸಿ ಹಾಕಿದ ಘಟನೆ ಮುಜಪ್ಪರ್‌ನಗರದ ಮುಸ್ತಫಾಗಂಜ್ ಎಂಬ ಹಳ್ಳಿಯಲ್ಲಿ ನಡೆದಿದೆ.
ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಎರಡು ವರ್ಷಗಳ ಹಿಂದಾದ ತನ್ನ ಪತ್ನಿಯ ಸಾವು ಕೂಡ ಆತ್ಮಹತ್ಯೆಯಲ್ಲ ತಾನೇ ಕೊಂದಿದ್ದು ಎಂದು ಸಹ ಒಪ್ಪಿಕೊಂಡಿದ್ದಾನೆ. ಆರೋಪಿಯ ಮಗಳು ಕಳೆದ ನಾಲ್ಕು ತಿಂಗಳ ಹಿಂದೆ ಪಕ್ಕದೂರಿನ ಒಂದು ಸಣ್ಣ ಅಂಗಡಿ ಮಾಲೀಕನನ್ನು ಮದುವೆಯಾಗಿದ್ದಳು.
ಎರಡು ದಿನಗಳ ಹಿಂದೆ ಆಕೆ ಗಂಡನ ಜತೆ ತವರಿಗೆ ಬಂದಿದ್ದಳು. ಬುಧವಾರ ರಾತ್ರಿ ಕುಡಿದು ಮನೆಗೆ ಬಂದ ರಕ್ತು ತನ್ನ ಅಳಿಯ ಮಗಳು ನಿದ್ರಿಸುತ್ತಿದ್ದ ಕೋಣೆಗೆ ಬಂದು ಅಳಿಯನ ಬಳಿ ಜಗಳವಾಡತೊಡಗಿದ. ತಕ್ಷಣ ಮನೆಯಿಂದ ಆಚೆ ಹೋಗದಿದ್ದರೆ ಕೊಲ್ಲುವುದಾಗಿ ಆತ ಅಳಿಯನಿಗೆ ಬೆದರಿಕೆ ಹಾಕಿದ. ಆತ ಮನೆಯಿಂದ ಆಚೆ ಹೋದ ಮೇಲೆ ಮಗಳ ಮೇಲೆರಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ. ಆತನಿಗೆ ಪ್ರತಿರೋಧ ತೋರಿದ ಆಕೆ ಸಹಾಯಕ್ಕಾಗಿ ಕೂಗಿಕೊಂಡಳು. ಇದರಿಂದ ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ಮೇವು ಕತ್ತರಿಸುವ ಸಾಧನದಿಂದ ಆಕೆಯ ಕುತ್ತಿಗೆ, ಕೈ, ಹೊಟ್ಟೆ, ಕಾಲುಗಳಿಗೆ ಮಾರಕವಾಗಿ ದಾಳಿ ನಡೆಸಿ ಕೊಂದು ಹಾಕಿದ. ಆಕೆಯ ಮೇಮೇಲೆ 15 ರಿಂದ 20 ಗಾಯದ ಗುರುತುಗಳಿವೆ.
ಆರೋಪಿಯ ರಕ್ತುವಿನ 5 ಜನ ಮಕ್ಕಳಲ್ಲಿ ಇವಳೇ ದೊಡ್ಡವಳಾಗಿದ್ದಳು. ಘಟನೆ ನಡೆದ ಸಮಯದಲ್ಲಿ ನಾಲ್ಕು ಜನ ಅಪ್ರಾಪ್ತ ಮಕ್ಕಳು ಇನ್ನೊಂದು ಕೋಣೆಯಲ್ಲಿ ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ.