Publish Date: Fri, 12 Aug 2022 (08:40 IST)
Updated Date: Fri, 12 Aug 2022 (09:03 IST)
ಮಧ‍್ಯಪ್ರದೇಶ: ಪತ್ನಿ ಜೊತೆ ಜಗಳವಾಡಿದ ಪತಿ ಆಕೆಯ ಮೇಲಿನ ಸಿಟ್ಟಿಗೆ ಸ್ವಂತ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಹೀನ ಕೃತ್ಯ ಮಧ‍್ಯಪ್ರದೇಶದಲ್ಲಿ ನಡೆದಿದೆ.
ಗಂಡ-ಹೆಂಡಿರ ನಡುವೆ ಜಗಳವಾಡಿದ ಬಳಿಕ ಮಗಳನ್ನು ಮನೆಯಲ್ಲೇ ಬಿಟ್ಟು ಹೆಂಡತಿ ತವರಿಗೆ ಹೋಗಿದ್ದಳು. ಈ ವೇಳೆ ತಂದೆ 9 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ತಾಯಿ ಮನೆಗೆ ಮರಳಿ ಬಂದಾಗ ಮಗಳು ಅಳುತ್ತಾ ಕೂತಿರುವುದು ನೋಡಿ ವಿಚಾರಿಸಿದಾಗ ತಂದೆ ಮಾಡಿ ಹೀನ ಕೃತ್ಯ ಬಾಯ್ಬಿಟ್ಟಿದ್ದಾಳೆ.
ತಕ್ಷಣವೇ ಇಬ್ಬರೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.