Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಮಗಳನ್ನು ಕೊಲೆ ಮಾಡಿದ ತಂದೆ ಮೃತದೇಹವನ್ನು ಬಕೆಟ್ ನಲ್ಲಿ ಬಚ್ಚಿಟ್ಟು ನಾಟಕವಾಡಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಟೈಲರ್ ವೃತ್ತಿ ಮಾಡುತ್ತಿದ್ದ ಆರೋಪಿಗೆ ತನ್ನ ಪತ್ನಿಯ ಶೀಲದ ಮೇಲೆ ಶಂಕೆಯಾಗಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು. ಪತ್ನಿ ಮನೆಯಿಲ್ಲಲ್ಲದ ವೇಳೆ ಮಗಳನ್ನು ಕೊಲೆ ಮಾಡಿದ್ದ ಆರೋಪಿ ಬಕೆಟ್ ಒಂದರಲ್ಲಿ ಮೃತದೇಹ ಬಚ್ಚಿಟ್ಟಿದ್ದ. ಪತ್ನಿ ಮನೆಗೆ ಬಂದು ಮಗಳ ಬಗ್ಗೆ ಕೇಳಿದಾಗ ಸಂಬಂಧಿಕರ ಮನೆಗೆ ಹೋಗಿರುವುದಾಗಿ ನಾಟಕವಾಡಿದ್ದ. ಬಳಿಕ ಮನೆಯಿಂದ ಪರಾರಿಯಾಗಿದ್ದ.
ನೆರೆಹೊರೆಯವರಿಗೆ ಮನೆಯಲ್ಲಿ ಕೊಳೆತ ವಾಸನೆ ಬಂದಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
-Edited by Rajesh Patil