Publish Date: Sat, 17 Apr 2021 (07:28 IST)
Updated Date: Sat, 17 Apr 2021 (07:30 IST)
ಕೃಷ್ಣಗಿರಿ : ಕೌಟುಂಬಿಕ ವಾಗ್ವಾದದ ವೇಳೆ ಮನೆಗೆ ಬಂದಿದ್ದ 21 ವರ್ಷದ ಗರ್ಭಿಣಿ ಮಗಳ ಮೇಲೆ ತಂದೆಯೇ ಗುಂಡು ಹಾರಿಸಿ ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮಹಿಳೆ ಪತಿಯೊಂದಿಗೆ ಯುಗಾದಿ ಆಚರಿಸಲು ತವರು ಮನೆಗೆ ಬಂದಿದ್ದಾಳೆ. ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು. 60ವರ್ಷದ ತಂದೆ ಮದ್ಯವ್ಯಸನಿಯಾಗಿದ್ದು ಈ ಕಾರಣಕ್ಕೆ ತಂದೆ ತಾಯಿಯ ನಡುವೆ ಜಗಳ ಶುರುವಾಗಿದೆ. ಆಗ ಗನ್ ತಂದ ತಂದೆ ತಾಯಿಗೆ ಶೂಟ್ ಮಾಡಿದಾಗ ಅಡ್ಡಬಂದ ಮಗಳಿಗೆ ಗುಂಡೇಟು ತಗುಲಿದೆ.
ಗುಂಡಿನ ಶಬ್ದ ಕೇಳಿ ನೆರೆಮನೆಯವರು ಬಂದು ರಕ್ತದ ಮಡುವಿನಲ್ಲಿ ಬಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆ ಆಗಲೇ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಆರೋಪಿ ತಂದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.