Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ತಿರುವನಂತಪುರಂ: ಮಾದಕ ವಸ್ತುಗಳ ವ್ಯಸನಿಯಾಗಿದ್ದ ಮಗನನ್ನು ತಂದೆಯೇ ಕೊಂದ ಘಟನೆ ಕೇರಳದಲ್ಲಿ ನಡೆದಿದೆ.
ಇತ್ತೀಚೆಗೆ 24 ವರ್ಷದ ಯುವಕನ ಮೃತದೇಹ ಆತನ ಬೆಡ್ ರೂಂನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಈಗ ತಂದೆಯನ್ನು ಬಂಧಿಸಲಾಗಿದೆ.
ಘಟನೆ ನಡೆದ ದಿನ ಮಗ ಮಾದಕ ವಸ್ತುವಿಗಾಗಿ ತಂದೆಯೊಡನೆ ಜಗಳವಾಡಿದ್ದ. ಮಗನ ರೌದ್ರಾವತಾರ ನೋಡಿ ತಾಯಿ ಮತ್ತು ಸಹೋದರಿ ಪಕ್ಕದ ಮನೆಗೆ ಹೋಗಿದ್ದರು. ಈ ವೇಳೆ ಮಗನನ್ನು ತಂದೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.