ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದ ದಿಯೋರಿಯಾದಲ್ಲಿ ಖಾಟ್ ಸಭಾವನ್ನು ಅಂತ್ಯಗೊಳಿಸಿದ ಕೂಡಲೇ ಅನೇಕ ಮಂದಿ ರೈತರು ಮರದ ಮಂಚಗಳನ್ನು ಎತ್ತಿಕೊಂಡು ಸೀದಾ ಮನೆಯ ಹಾದಿ ಹಿಡಿದರು. ಮರದ ಮಂಚಗಳನ್ನು ಮನೆಗೆ ಒಯ್ಯುವುದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲದ ಸ್ಥಿತಿ ಉಂಟಾಯಿತು.
ಸಭೆ ಮುಗಿದ ಬಳಿಕ ಮಂಚವನ್ನು ಮನೆಗೆ ತೆಗೆದುಕೊಂಡುಹೋಗುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆಂದು ರಾಹುಲ್ ಕಾಟ್ ಸಭಾಗೆ ಭೇಟಿ ನೀಡಿದ ಗ್ರಾಮಸ್ಥರೊಬ್ಬರು ತಿಳಿಸಿದರು.
ಇನ್ನೊಬ್ಬ ರೈತ ಪರಿಸ್ಥಿತಿಯನ್ನು ಅಪಹಾಸ್ಯ ಮಾಡಿ, ''ಸಭಾ ಕತಮ್, ಕಾಟ್ ಖತಮ್'' ಎಂದು ಹೇಳಿದರು. ರಾಹುಲ್ ಮಂಗಳವಾರ ಉ.ಪ್ರದೇಶದ ರಾಜಕೀಯ ಪ್ರಾಮುಖ್ಯತೆಯ ರಾಜ್ಯದಲ್ಲಿ ಅಧಿಕಾರ ಹಿಡಿಯಲು ತಮ್ಮ ಉ.ಪ್ರದೇಶ ಅಭಿಯಾನವನ್ನು ರೈತರ ಜತೆ ಖಾಟ್ ಸಭಾದೊಂದಿಗೆ ಆರಂಭಿಸಿದ್ದರು.
ರೈತರನ್ನು ಭೇಟಿ ಮಾಡಿ 2017ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದರೆ ಸಾಲ ಮನ್ನಾ, ವಿದ್ಯುತ್ ದರದಲ್ಲಿ ಶೇ. 50ರಷ್ಟು ಕಡಿತ ಮುಂತಾದ ಆಮಿಷಗಳನ್ನು ರೈತರಿಗೆ ಒಡ್ಡಿದರು.