ಅಹಮ್ಮದಾಬಾದ್: ಮನೆ ಮಗಳ ಮೇಲೆ ಎರಡು ತಿಂಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ ವಿಡಿಯೋ ನೋಡಿ ಕುಟುಂಬಸ್ಥರು ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಎಲ್ಲಾ ಆರೋಪಿಗಳನ್ನೂ ಬಂಧಿಸಲಾಗಿದೆ.
ಎರಡು ತಿಂಗಳ ಹಿಂದೆ ಮದುವೆ ಮನೆಗೆ ಹೋಗಿದ್ದಾಗ ಮೊದಲು ಅಪ್ರಾಪ್ತೆಯ ಸ್ನೇಹಿತ ಅತ್ಯಾಚಾರ ನಡೆಸಿದ್ದ. ಇದಾದ ಬಳಿಕ ಆತನ ಎಂಟು ಮಂದಿ ಸ್ನೇಹಿತರು ಅತ್ಯಾಚಾರವೆಸಗಿದ್ದರು. ಈ ಘಟನೆ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಅಪ್ರಾಪ್ತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.
ಹೀಗಾಗಿ ಬಾಲಕಿ ಘಟನೆ ಬಗ್ಗೆ ಮೌನವಾಗಿದ್ದಳು. ಆದರೆ ಇತ್ತೀಚೆಗೆ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಅದನ್ನು ಗಮನಿಸಿದ ಸಂಬಂಧಿಕರು ಮನೆಯವರಿಗೆ ತಿಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.