ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನಿಯಾದವರು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಸಭ್ಯ ರಾಜಕಾರಣಿ ಎಂದೇ ಪರಿಚಿತರು.
ಆದರೆ ಮನಮೋಹನ್ ಸಿಂಗ್ ಸುಳ್ಳುಗಾರ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಆರೋಪಿಸಿದ್ದಾರೆ. ಗುಜರಾತ್ ನಲ್ಲಿ ಡಾ. ಸಿಂಗ್ ನೀಡಿದ್ದ ಹೇಳಿಕೆಯೊಂದನ್ನು ಆಧರಿಸಿ ಸಿಎಂ ವಿಜಯ್ ಅವರ ಮೇಲೆ ಸುಳ್ಳುಗಾರನ ಪಟ್ಟಿ ಕಟ್ಟಿದ್ದಾರೆ.
2011 ರಲ್ಲಿ ಅಂದು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ, ಅಂದು ಪ್ರಧಾನಿಯಾಗಿದ್ದ ತಮ್ಮ ಬಳಿ ನರ್ಮದಾ ನದಿ ವಿವಾದದ ವಿಚಾರವಾಗಿ ಚರ್ಚಿಸಿರಲೇ ಇಲ್ಲ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ಆದರೆ ಈ ಹೇಳಿಕೆ ಬರೀ ಸುಳ್ಳು. 2011 ಮತ್ತು 2013 ರಲ್ಲಿ ಮೋದಿ, ಮನಮೋಹನ್ ಸಿಂಗ್ ರನ್ನು ಭೇಟಿಯಾಗಿದ್ದರು. ಡಾ. ಸಿಂಗ್ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ವಿಜಯ್ ರೂಪಾನಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ