Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಸರಕಾರದ ನೋಟ್‌ಬ್ಯಾನ್, ಜಿಎಸ್‌ಟಿ ದೇಶಕ್ಕೆ ವಿನಾಶಕಾರಿ; ಗುಂಡೂರಾವ್

ಮೋದಿ ಸರಕಾರದ ನೋಟ್‌ಬ್ಯಾನ್, ಜಿಎಸ್‌ಟಿ ದೇಶಕ್ಕೆ ವಿನಾಶಕಾರಿ; ಗುಂಡೂರಾವ್
ಬೆಂಗಳೂರು , ಬುಧವಾರ, 8 ನವೆಂಬರ್ 2017 (13:36 IST)
ಒಳ್ಳೆಯದಕ್ಕೆ ನೋಟ್ ಬ್ಯಾನ್ ಮಾಡಿದ್ದಾರೆ ಅಂದಕೊಂಡಿದ್ದರು. ನೋಟ್‌ಬ್ಯಾನ್‌ನಿಂದ ಕಪ್ಪು ಹಣ ವಾಪಸ್ ಬರುತ್ತೆ ಎಂದು ಜನತೆ ಭಾವಿಸಿದ್ದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನೋಟ್‌ಬ್ಯಾನ್‌ನಿಂದಾಗಿ ದೇಶದ ಜಿಡಿಪಿ ಕುಸಿಯುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯಸಭೆಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೆ, ಪ್ರಧಾನಿ ಮೋದಿ ಸರಕಾರ ನೋಟ್ ಬ್ಯಾನ್ ಜಾರಿಗೊಳಿಸಿ ದೇಶದ ಆರ್ಥಿಕತೆ ಕುಸಿಯುವಂತೆ ಮಾಡಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕೇಂದ್ರ ಸರಕಾರದ ನೋಟ್ ಬ್ಯಾನ್ ಲಾಭ ಪಡೆದ ಕಪ್ಪು ಹಣ ಹೊಂದಿದವರು ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸುವಲ್ಲಿ ಸಫಲರಾದರು. ಕಪ್ಪು ಹಣ ಎಲ್ಲಿ ಹೋಯಿತು ಎನ್ನುವುದೇ ಗೊತ್ತಾಗಲಿಲ್ಲ. ಆದರೆ, ಬಡವರು, ಸಣ್ಣ ವ್ಯಾಪಾರಿಗಳು ಸಂಕಷ್ಟ ಅನುಭವಿಸುವಂತಾಯಿತು ಎಂದು ಕಿಡಿಕಾರಿದರು.
 
ಪ್ರಧಾನಿ ಮೋದಿ ಸರಕಾರದ ನೋಟ್ ಬ್ಯಾನ್ ಮತ್ತು ಜಿಎಸ್‌ಟಿಯಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದುಹೋಗಿದೆ. ಮುಂಬರುವ ದಿನಗಳಲ್ಲಿ ಜನತೆ ಮೋದಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಟಿಪ್ಪು ಸುಲ್ತಾನನ ಶನಿ ಸಂತಾನದ ವಾರಸುದಾರ: ಅದ್ದಂಡ ಕಾರ್ಯಪ್ಪ