ವಿದೇಶಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ಮರಳಿ ಪಡೆಯಲು ಅಂತಾರಾಷ್ಟ್ರೀಯ ಮಟ್ಟದ ಸಹಕಾರ ಅಗತ್ಯವಾಗಿದೆ. ಬ್ಯಾಂಕ್‌ಗಳ ರಹಸ್ಯ ವ್ಯವಹಾರಗಳ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭ್ರಷ್ಟಾಚಾರ ಮತ್ತು ಕಪ್ಪು ಹಣದ ಬಗ್ಗೆ ಭಾರತ ಸರಕಾರ ಶೂನ್ಯ ತಾಳ್ಮೆಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಘೋಷಿತ ಆಸ್ತಿ ಮತ್ತು ಆದಾಯವನ್ನು ವಿದೇಶದಲ್ಲಿ ಹೂಡಿಕೆ ಮಾಡುವುದನ್ನು ತಡೆಯಲು ಕೇಂದ್ರ ಸರಕಾರ ಹೊಸ ಕಠಿಣ ನೀತಿುಗಳನ್ನು ಜಾರಿಗೆ ತಂದಿದೆ ಎಂದು ಟ್ವಿಟ್ ಮಾಡಿದ್ದಾರೆ.
ಕಪ್ಪು ಹಣ ಬಳಕೆಯನ್ನು ತಡೆಯಲು ಜಾಗತಿಕ ಸಹಕಾರ ಅಗತ್ಯವಾಗಿದೆ. ಜಿ-20 ರಾಷ್ಟ್ರಗಳು ಕಪ್ಪು ಹಣ ತಡೆಗೆ ಮುಂದಾಗಬೇಕು ಎಂದು ಪ್ರಧಾನಿ ಮೋದಿ ವಿಶ್ವ ನಾಯಕರನ್ನು ಕೋರಿದ್ದಾರೆ.