ನವದೆಹಲಿ:ಇ-ಮೇಲ್ ಗಳು ಎಷ್ಟು ಶಾರ್ಟ್ ಮತ್ತು ಅಟ್ರ್ಯಾಕ್ಟೀವ್ ಆಗಿರಬೇಕೆಂದರೆ ’ಮಿನಿ ಸ್ಕರ್ಟ್’ನಂತಿರಬೇಕು ಎಂದು ದೆಹಲಿ ವಿಶ್ವ ವಿದ್ಯಾಲಯದ ಬಿಕಾಂ ಪಠ್ಯದಲ್ಲಿ ವಿವರಿಸಲಾಗಿದೆ.
ದೆಹಲಿ ವಿವಿ ಕಾಲೇಜಿನ ವಾಣಿಜ್ಯ ವಿಭಾಗದ ಮಾಜಿ ಮುಖ್ಯಸ್ಥ ಸಿ ಬಿ ಗುಪ್ತಾ ಬರೆದ ’ಬೇಸಿಕ್ ಬ್ಯುಸಿನೆಸ್ ಕಮ್ಯುನಿಕೇಷನ್’ ಪಠ್ಯದಲ್ಲಿ ವಿವರಿಸಲಾಗಿದೆ. 10 ವರ್ಷಗಲಿಂದ ಚಾಲ್ತಿಯಲ್ಲಿರುವ ಈ ಪುಸ್ತಕದಲ್ಲಿ ಇ-ಮೇಲ್ ಸಂದೇಶಗಳು ಸ್ಕರ್ಟ್ ನಂತೆ ಇರಬೇರ್‍ಕು. ಆಸಕ್ತಿದಾಯಕವಾಗುವಷ್ಟು ಗಿಡ್ಡ ಹಾಗೂ ಎಲ್ಲ ಅಂಶಗಳನ್ನೂ ಒಳಗೊಳ್ಳುವಷ್ಟು ಉದ್ದವಿರಬೇಕು ಎಂದು ವಿವರಿಸಲಾಗಿದೆ.
ಇದು ಸಮಾಜದಲ್ಲಿ ಸೆಕ್ಸಿಸಂ ನ್ನು ಅಧಿಕೃತಗೊಳಿಸುವ ಪ್ರಯತ್ನ ಎಂಬುದು ಹಲವು ವಿದ್ಯಾರ್ಥಿಗಳ ವಾದ. ಇನ್ನು ದೆಹಲಿ ವಿವಿ ಕಾಲೇಜುಗಳಲ್ಲಿ ಈ ಪಠ್ಯ ಬಳಸದಂತೆ ವಿದ್ಯಾರ್ಥಿಗಳಿಗೆ ಹಲವು ಪ್ರಾದ್ಯಾಪಕರು ಶಿಫಾರಸು ಮಾಡಿದ್ದಾರೆ. ಒಟ್ಟಾರೆಯಾಗಿ ಈಗ ಇ-ಮೇಲ್ ಗಳು ಮಿನಿಸ್ಕರ್ಟ್ ನಂತಿರಬೇಕು ಎಂಬ ಮುದ್ರಣ ವಿವಾದಕ್ಕೆ ಕಾರಣವಾಗಿದೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..