Publish Date: Wed, 05 Aug 2026 (15:28 IST)
Updated Date: Wed, 05 Aug 2026 (15:34 IST)
ಸತ್ಯಮಂಗಲಂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುತೂಹಲಕಾರಿ ಹಾಗೂ ತಮಾಷೆಯ ಸನ್ನಿವೇಶವೊಂದು ನಡೆದಿದೆ. ಅರಣ್ಯ ಪ್ರದೇಶದ ರಸ್ತೆಯಲ್ಲಿ ಸಾಗುತ್ತಿದ್ದ ಕಬ್ಬಿನ ಲಾರಿಯೊಂದನ್ನು ಏಕಾಂಗಿ ಕಾಡಾನೆಯೊಂದು ತಡೆದು ನಿಲ್ಲಿಸಿ, ಹೊಟ್ಟೆತುಂಬ ಕಬ್ಬು ತಿಂದು ಸಾಗಿದ ಭಾವುಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಅರಣ್ಯ ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಕಂಡ ಕಾಡಾನೆ, ರಸ್ತೆಯ ಮಧ್ಯದಲ್ಲೇ ನಿಂತು ಲಾರಿಗೆ ದಾರಿ ಬಿಡದೆ ತಡೆದು ನಿಲ್ಲಿಸಿದೆ. ಲಾರಿ ನಿಲ್ಲುತ್ತಿದ್ದಂತೆ ಮುಂಭಾಗಕ್ಕೆ ಬಂದ ಆನೆ, "ನನಗೆ ತುಂಬಾ ಹಸಿವಾಗಿದೆ ಸಹೋದರ, ಒಂದೇ ಒಂದು ಕಟ್ಟು ತಗೊಳ್ತೀನಿ" ಎಂಬಂತೆ ತನ್ನ ಸೊಂಡಿಲಿನಿಂದ ಲಾರಿಯಲ್ಲಿದ್ದ ಕಬ್ಬಿನ ಕಟ್ಟುಗಳನ್ನು ಎಳೆದು ತಿನ್ನಲು ಪ್ರಾರಂಭಿಸಿದೆ.
ಲಾರಿ ಚಾಲಕ ಹಾಗೂ ಪ್ರಯಾಣಿಕರು ಯಾವುದೇ ಗಡಿಬಿಡಿ ಮಾಡದೇ ಆನೆಗೆ ತೊಂದರೆ ನೀಡದೆ ಶಾಂತವಾಗಿ ಕಾಯ್ದಿದ್ದಾರೆ. ಆನೆ ತನಗೆ ಬೇಕಾದಷ್ಟು ಕಬ್ಬನ್ನು ತಿಂದು ತೃಪ್ತಿಯಾದ ನಂತರ ಸ್ವತಃ ತಾನೇ ದಾರಿ ಬಿಟ್ಟು ಕಾಡಿನತ್ತ ಹೆಜ್ಜೆ ಹಾಕಿದೆ. ಹಿಂಬದಿಯ ವಾಹನ ಸವಾರರು ಈ ಮುದ್ದಾದ ಸನ್ನಿವೇಶವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಜಾಲತಾಣಗಳಿಗೆ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ವೀಕ್ಷಿಸಿದ ನೆಟ್ಟಿಗರು "ಆನೆಗೆ ಸಿಹಿ ತಿನ್ನಬೇಕೆನಿಸಿ ಟೋಲ್ ಗೇಟ್ ಹಾಕಿದೆ" ಎಂದು ಹಾಸ್ಯಸ್ಪದವಾಗಿ ಕಮೆಂಟ್ ಮಾಡುತ್ತಿದ್ದು, ಆನೆಯ ಬುದ್ಧಿವಂತಿಕೆಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ