ಎಬಿವಿಪಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದ ಕಾರ್ಗಿಲ್ ಹುತಾತ್ಮ ಮನದೀಪ್ ಸಿಂಗ್ ಪುತ್ರಿ ಗುರ್‌ಮೆಹರ್ ಕೌರ್ ತಮ್ಮ ನಡೆಯನ್ನು ಹಿಂದಕ್ಕಿಟ್ಟಿದ್ದಾರೆ.
ನಾನು ಅಭಿಯಾನದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ನನ್ನ ಹೋರಾಟವಿದ್ದಿದು ಹಿಂಸೆಯ ವಿರುದ್ಧ ಮಾತ್ರ. ಎಲ್ಲರಿಗೂ ಧನ್ಯವಾದಗಳು.ನಾನು ಹೇಳಬೇಕಾಗಿದ್ದನ್ನು ಹೇಳಿಯಾಗಿದೆ. ಮತ್ತೀಗ ನನ್ನನ್ನು ಒಂಟಿಯಾಗಿರಲು ಬಿಡಿ ಎಂದಾಕೆ ಫೇಸ್‌ಬುಕ್ ಮೂಲಕ ವಿನಂತಿಸಿದ್ದಾಳೆ. ಇಂದು ನಡೆಯಲಿರುವ AISA ಮೆರವಣಿಗೆಯಲ್ಲಿ ಸಹ ತಾನು ಭಾಗವಹಿಸುವುದಿಲ್ಲ ಎಂದಾಕೆ ಸ್ಪಷ್ಟಪಡಿಸಿದ್ದಾಳೆ.
ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ನಡೆದ ವಿಚಾರ ಸಂಕೀರಣದಲ್ಲಿ ಪಾಲ್ಗೊಳ್ಳುವಂತೆ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್‌ಗೆ(ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದ ಆರೋಪಿ) ಆಮಂತ್ರಣ ನೀಡಲಾಗಿತ್ತು. ಇದನ್ನು ವಿರೋಧಿಸಿ ಎಬಿವಿಪಿ, ಕಾಲೇಜು ಆವರಣದಲ್ಲಿ ಗಲಾಟೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಎಬಿವಿಪಿ ವಿರುದ್ಧ ಕ್ಯಾಪ್ಟನ್ ಮನ್ದೀಪ್ ಸಿಂಗ್ ಮಗಳು ಗುರ್ ಮೆಹರ್ ಕೌರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು.
ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ. ನನಗೆ ಎಬಿವಿಪಿ ಭಯವಿಲ್ಲ. ನಾನು ಒಬ್ಬಂಟಿ ಅಲ್ಲ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ನನ್ನ ಜತೆ ಇದ್ದಾರೆ. #StudentsAgainstABVP"- ಎಂದು ಲೇಡಿ ಶ್ರೀರಾಮ್ ಕಾಲೇಜು ವಿದ್ಯಾರ್ಥಿನಿಯಾದ ಕೌರ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದಳು. ಈ ಪೋಸ್ಟ್ ಪ್ರಕಟಿಸಿದ ಬಳಿಕ ಎಬಿವಿಪಿಯಿಂದ ನನಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳು ಬಂದಿವೆ ಎಂದಾಕೆ ದೂರಿದ್ದಳು.
ಜತೆಗೆ ನನ್ನ ತಂದೆಯನ್ನು ಕೊಂದಿದ್ದು ಪಾಕಿಸ್ತಾನವಲ್ಲ. ಯುದ್ಧ ಎಂದು ಆಕೆ ಪ್ರಕಟಿಸಿದ್ದ ಪೋಸ್ಟ್‌ಗಂತೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು
ಕ್ರಿಕೆಟ್ ಸ್ಟಾರ್ ಸೆಹ್ವಾಗ್ ಸೇರಿದಂತೆ ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ನಡೆಯುತ್ತಿರುವ ಬೆಳವಣಿಗೆಗಳಿಂದ ಬೇಸತ್ತಿರುವ ಆಕೆ ತನ್ನ ಅಭಿಯಾನದಿಂದ ಹಿಂದಕ್ಕೆ ಸರಿದಿದ್ದಾರೆ.