ನವದೆಹಲಿ: ಮಹಿಳೆಯ ಅನುಮತಿ ಇಲ್ಲದೆ ಯಾರೂ ಆಕೆಯ ಮೈ ಮುಟ್ಟುವ ಹಾಗೆ ಇಲ್ಲ ಎಂದು ದೆಹಲಿ ನ್ಯಾಯಾಲಯ ತಾಕೀತು ಮಾಡಿದೆ.
ಮಹಿಳೆಯ ದೇಹ ಆಕೆಯ ವಿಶೇಷ ಸ್ವತ್ತು. ಅವಳ ದೇಹದ ಮೇಲೆ ಆಕೆಗಲ್ಲದೇ ಬೇರೆ ಯಾರಿಗೂ ಹಕ್ಕಿಲ್ಲ. ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಯಾರೂ ಕೂಡ ಸ್ಪರ್ಶಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಮಹಿಳೆಯ ಈ ಸ್ವಾತಂತ್ರ್ಯವನ್ನು ಪುರುಷರು ಗೌರವಿಸಬೇಕು. ಕಾಮುಕರು ಮತ್ತು ವಿಕೃತಕಾಮಿಗಳು ತಮ್ಮ ಲೈಂಗಿಕ ವಾಂಛೆಗೆ ಪುಟ್ಟ ಬಾಲಕಿಯರನ್ನು ಬಳಸಿಕೊಳ್ಳುತ್ತಿರುವುದು ತುಂಬಾ ನಾಚಿಕೆಗೇಡು ಮತ್ತು ಅಮಾನವೀಯವಾದ ಕೃತ್ಯವಾಗಿದೆ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ