ಬೆಂಗಳೂರು: ಪುರುಷರನ್ನು ಕಠಿಣತೆಗೆ ಹೋಲಿಸಲಾಗುತ್ತದೆ. ಅದೇ ಮಹಿಳೆಯರನ್ನು ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಗಟ್ಟಿ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ.
ಪುರುಷರ ಸೆಕ್ಸ್ ಹಾರ್ಮೋನ್ ಮತ್ತು ಮಹಿಳೆಯರ ಸೆಕ್ಸ್ ಹಾರ್ಮೋನ್ ಬೇರೆಯದೇ ಆಗಿರುತ್ತದೆ. ಮಹಿಳೆಯರ ಸೆಕ್ಸ್ ಹಾರ್ಮೋನ್ ಈಸ್ಟ್ರೋಜನ್ ಅಧಿಕ ರೋಗ ನಿರೋಧಕ ಶಕ್ತಿಯನ್ನು ಉತ್ಪನ್ನ ಮಾಡುತ್ತದೆ. ಅದೇ ಪುರುಷರ ಸೆಕ್ಸ್ ಹಾರ್ಮೋನ್ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದಂತೆ.
ಹಾಗಾಗಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಪುರುಷರು ಬೇಗ ಖಾಯಿಲೆಗೊಳಗಾಗುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ