Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಯ್ಯಪ್ಪ ಭಕ್ತನ ಜತೆ 600ಕೀಮೀ ಬೀದಿ ನಾಯಿ ಪಾದಯಾತ್ರೆ

ಅಯ್ಯಪ್ಪ ಭಕ್ತನ ಜತೆ 600ಕೀಮೀ ಬೀದಿ ನಾಯಿ ಪಾದಯಾತ್ರೆ
ಕೋಳಿಕ್ಕೋಡ್ , ಗುರುವಾರ, 29 ಡಿಸೆಂಬರ್ 2016 (15:41 IST)
ಬೀದಿನಾಯಿಯೊಂದು ಅಯ್ಯಪ್ಪ ಸ್ವಾಮಿ ಭಕ್ತನನ್ನು ಹಿಂಬಾಲಿಸಿ ಬರೊಬ್ಬರಿ 600ಕೀಲೋಮೀಟರ್ ಪ್ರಯಾಣ ಬೆಳೆಸಿದ ಹೃದಯಸ್ಪರ್ಶಿ ಪ್ರಸಂಗ ಬೆಳಕಿಗೆ ಬಂದಿದೆ. 
17 ದಿನಗಳ ಪ್ರಯಾಣದ ಈ ಕಥೆ ನಿಜಕ್ಕೂ ಬಹುಸುಂದರವಾಗಿದ್ದು ಶ್ರೀಕಾಂತ ಎಂಬುವವರ ಜತೆ ಯಾತ್ರೆ ನಡೆಸಿದ ನಾಯಿ ಕೊನೆಗೆ ಪಡೆದುಕೊಂಡಿದ್ದೇನು ಗೊತ್ತೇ? ತಂಗಲು ಬೆಚ್ಚನೆಯ ಮನೆ. ಕೊರಳಲ್ಲಿ ಕಪ್ಪು ಬೆಲ್ಟ್ ಮತ್ತು ಮುದ್ರಾ ಮಾಲೆ.  ಅಯ್ಯಪ್ಪ ಸ್ವಾಮಿ ಭಕ್ತರು ಆಕೆಗೆ ಪ್ರೀತಿಯಿಂದ ಇಟ್ಟ ಹೆಸರು ಮಾಲು- ಇದು ಮಾಲಿಕಪ್ಪುರಮ್ಮ (ಶಬರಿಮಲೆಗೆ ಯಾತ್ರೆಗೆ ಹೋಗುವ ಮಹಿಳಾ ಭಕ್ತರನ್ನುದ್ದೇಶಿಸಿ ಬಳಸುವ ಹೆಸರು) 
 
ಈ ಅಪರೂಪದ ಕಥೆ ಹೀಗಿದೆ: ಕೇರಳ ರಾಜ್ಯ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡುತ್ತಿರುವ ಕೋಳಿಕೋಡ್ ನಿವಾಸಿ ನವೀನ್ (38) ಪಾದಚಾರಿಯಾಗಿ ಡಿಸೆಂಬರ್ 7 ರಂದು ಶಬರಿ ಮಲೈಗೆ ಹೊರಟಿದ್ದರು. ಕೊಲ್ಲೂರಿನ ಮೂಕಾಂಬಿಕಾ ದೇವಾಲಯದಿಂದ ಅವರು ಪಾದಯಾತ್ರೆಯನ್ನು ಆರಂಭಿಸಿದ್ದು, ಈ ಸಮಯದಲ್ಲಿ ತಾವು ಲೈಫ್ ಟೈಮ್ ಗೆಳೆಯರೋರ್ವರನ್ನು ಭೇಟಿಯಾಗಲಿದ್ದೇನೆ ಎಂಬ ಚಿಕ್ಕ ಸುಳಿವು ಅವರಿಗಿರಲಿಲ್ಲ.  
 
ಆ ದಿನ ನಸುಕಿನ ಜಾವದಲ್ಲಿ ಒಂದಷ್ಟು ಬೀದಿನಾಯಿಗಳು ಅವರನ್ನೆದುರಾದವು. ಅದರಲ್ಲಿ ಒಂದು ನಾಯಿ ಮಾತ್ರ ಅವರಿಗೆ ವಿಭಿನ್ನವಾಗಿ ಕಂಡಿತು. ತಮ್ಮನ್ನದು ವಿಶೇಷವಾಗಿ ಗಮನಿಸುತ್ತಿದೆ ಎಂದೆನ್ನಿಸಿತವರಿಗೆ. ಆದರೆ ಅದನ್ನವರು ಗಂಭೀರವಾಗಿ ಪರಿಗಣಿಸಲಿಲ್ಲ.
 
ಅದು 80ಕೀಲೋ ಮೀಟರ್‌ ತನ್ನನ್ನು ಹಿಂಬಾಲಿಸಿದ್ದು ನನಗೆ ತಿಳಿಯಲೇ ಇಲ್ಲ. ಎದುರಿನ ದಿಕ್ಕಿನಿಂದ ನನ್ನಡೆಗೆ ಬಂದ ಅವಳು ನನ್ನ ಮುಂದೆ ಬರುತ್ತಿದ್ದಂತೆ ನಿಂತು ಬಿಟ್ಟಿತು. ಬಳಿಕ ಜತೆಗೆ ಬಂತು. ನಾನು ಬಹಳ ಸಲ ಅವಳನ್ನು ದೂರ ಅಟ್ಟಲು ಪ್ರಯತ್ನಿಸಿದೆ. ಆದರೆ ಆಕೆ ನನ್ನನ್ನು ಬಿಟ್ಟು ಕದಲಲೇ ಅಲ್ಲ ಎನ್ನುತ್ತಾರೆ ನವೀನ್.
 
ಈಗಾಗಲೇ ತಾನು ದೃಢ ನಿರ್ಧಾರ ತೆಗೆದುಕೊಂಡಿಯಾಗಿದ ಎನ್ನುವಂತೆ ಆಕೆ ನನ್ನ ಜತೆ ನಡೆದಳು. ಮೊದಮೊದಲು ನನ್ನಿಂದ 20ಮೀಟರ್ ದೂರದಲ್ಲಿ ನಡೆಯುತ್ತಿದ್ದಳು. ಮುಂದೆ ಮುಂದೆ ನಡೆಯುತ್ತಿದ್ದ ಆಕೆ ಆಗಾಗ ಹಿಂದೆ ತಿರುಗಿ ನೋಡಿಕೊಂಡು ನಾನಾಕೆಯನ್ನು ಹಿಂಬಾಲಿಸುತ್ತಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಳು. ಕೆಲ ದಿನಗಳ ಬಳಿಕ ಆಕೆ ನನ್ನ ಹಿಂದೆ ನಡೆಯ ತೊಡಗಿದ ಆಕೆ  ನಿಧಾನವಾಗಿ ಕಾಲ ಬಳಿ ನುಸುಳುತ್ತಾ ನಡೆಯ ಹತ್ತಿದಳು ಎಂದು ಆಕೆಯೊಂದಿಗೆ ಅನುಬಂಧ ಬೆಸೆದ ದಿನಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ನವೀನ್. 
 
ಆಕೆ ಎಷ್ಟು ಬುದ್ಧಿವಂತಳೆಂಬುದು ನನಗೆ ಮೊದಲು ಅರಿವಾಗಲೇ ಇಲ್ಲ. ಕೋಳಿಕ್ಕೋಡ ದಾಟಿದ ಬಳಿಕ ಆಕೆ ನನ್ನನ್ನು ಬಿಟ್ಟು ಹೋಗುವುದಿಲ್ಲ ಎಂದು ನನಗರಿವಾಯಿತು. ಅದು ಬಹಳ ಚತುರ ನಾಯಿ. ನಾನು ಊಟಕ್ಕಾಗಿ ಮತ್ತು ಸ್ನಾನಕ್ಕಾಗಿ ಹೋದಾಗ ತಾಳ್ಮೆಯಿಂದ ನನ್ನ ಇರುಮುಡಿಯನ್ನು ಕಾಯುತ್ತಿತ್ತು. ರಾತ್ರಿ ನನ್ನ ಬಳಿಯೇ ಮಲಗುತ್ತಿತ್ತು ಎನ್ನುವ ನವೀನ್ ಅವರಿಗೆ ಪಂಪಾದಲ್ಲಿ ಮಂದಿರ ಬಳಿ ಆಕೆ ಸ್ವಲ್ಪ ಸಮಯ ಕಾಣದಾದಾಗ ಆಘಾತವಾಯಿತಂತೆ. ಬಳಿಕ ನೋಡಿದರೆ ಆಕೆ ಮಂದಿರಕ್ಕೆ ಹೋಗುವ ಮೆಟ್ಟಿಲ ಕೆಳಗೆ ನಿಂತಿದ್ದಳು. ಒಂದುವರೆ ದಿನಗಳ ಕಾಲ ಆಕೆ ಅಲ್ಲಿಯೇ ಕಾದಿದ್ದಳು. ನನ್ನ ಜತೆ ಹೋದ ಕೆಲ ಭಕ್ತರು ಫೋನ್ ಕರೆ ಮಾಡಿ ಮಲ್ಲು ಅಲ್ಲಿ ನಿಂತಿದ್ದಾಳೆ. ಎಲ್ಲರನ್ನು ಮೂಸಿ ನೋಡುತ್ತಿದ್ದಾಳೆ ಎಂದು ಹೇಳಿದರು. ನಾನು ಧಾವಿಸಿ ಅಲ್ಲಿಗೆ ಹೋಗುತ್ತಿದ್ದಂತೆ ಗುಂಪಿನ ನಡುವೆ ಇದ್ದ ನನ್ನನ್ನು ಕಂಡ ಆಕೆ ಮೈಮೇಲೆ ಜಿಗಿದು ಸಂತೋಷ ಪಟ್ಟಳು ಎನ್ನುತ್ತಾರೆ ನವೀನ್.
 
ಯಾತ್ರೆ ಮುಗಿದ ಬಳಿಕ ನವೀನ್ ಕೆಎಸ್‌ಆರ್‌ಟಿಸಿಯ ವಿಶೇಷ ಅಧಿಕಾರಿಗೆ ಆಕೆ ಮತ್ತು ತಮ್ಮ ವಿಶೇಷ ಸಂಬಂಧದ ಬಗ್ಗೆ ಹೇಳಿ ಅನುಮತಿ ಪಡೆದು ಬಸ್‌ನಲ್ಲಿ ಮನೆಗೆ ಕರೆದೊಯ್ದಿದ್ದಾರೆ.  
 
ಡಿಸೆಂಬರ್ 23 ರಂದು ತಮ್ಮೂರಿಗೆ ಮರಳಲೆಂದು ಆಕೆಗೆ ಸಹ 460 ರೂಪಾಯಿ ಟಿಕೆಟ್ ಪಡೆದು ಬಸ್ ಹತ್ತಿದೆ. ಬಸ್ ಹತ್ತುತಿದ್ದಂತೆ ನಿದ್ದೆ ಹೋದ ಆಕೆ ಮತ್ತೆ ಎದ್ದಿದ್ದು ನಡುರಾತ್ರಿ ಮನೆಗೆ ತಲುಪುವವರೆಗೆ ನಿದ್ದೆ ಮಾಡುತ್ತಲೇ ಇದ್ದಳು ಎಂದು ನವೀನ್ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. 
 
ಮತ್ತೀಗ ಮಾಲು ಬೈಪೋರ್‌ನಲ್ಲಿರುವ ಶ್ರೀಕಾಂತ ಮನೆಯಲ್ಲಿ ದೊಡ್ಡ ರಟ್ಟಿನ ಪೆಟ್ಟಿಗೆಯನ್ನು ತನ್ನ ವಾಸಸ್ಥಳವನ್ನಾಗಿಸಿಕೊಂಡಿದ್ದಾಳೆ. ಕಂದು ಮಣಿಗಳಿಂದ ಹಾರವನ್ನು ಕುತ್ತಿಗೆಗೆ ಹಾಕಿಕೊಂಡು ಗತ್ತಿನಿಂದ ಓಡಾಡುತ್ತಾಳೆ. ಆಕೆಯ ಈ ನಂಬಲಸಾಧ್ಯವಾದ ಪ್ರಯಾಣವನ್ನು ಶ್ರೀಕಾಂತ ಪದೇ ಪದೇ ನೆನಪಿಸಿಕೊಂಡು ಹೆಮ್ಮೆ ಪಡುತ್ತಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧ ಜಾರಿ ಕುರಿತಂತೆ ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಒತ್ತಾಯ