Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಹಮ್ಮದಾಬಾದ್: ನಾಯಿ ಮೂಗು ಎಂದರೆ ಸುಮ್ನೇನಾ? ಗುಜರಾತ್ ನಲ್ಲಿ ಪೊಲೀಸ್ ನಾಯಿಯೊಂದು ಅರ್ಧಗಂಟೆಯ ಅವಧಿಯಲ್ಲಿ ಆರು ಮಂದಿ ಅತ್ಯಾಚಾರಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಗುಜರಾತ್ ನ ವಡೋದರದಲ್ಲಿ 30 ವರ್ಷದ ಮಹಿಳೆಯ ಮೇಲೆ ಆರು ಮಂದಿ ಕಾಮುಕರು ಮಾನಭಂಗ ಮಾಡಿ ಹತ್ಯೆ ಮಾಡಿದ್ದರು. ಪೊಲೀಸ್ ವಿಚಾರಣೆ ವೇಳೆ ಮಹಿಳೆಯ ದುಪಟ್ಟಾ ಮತ್ತು ಒಂದು ಬಾಟಲಿಯನ್ನು ಮೂಸಿದ ಶ್ವಾನ ನೇರವಾಗಿ ಆರೋಪಿಗಳ ಬಳಿಗೆ ಪೊಲೀಸರನ್ನು ಕರೆದೊಯ್ದಿದೆ!
ಸುಮಾರು ಎರಡು ಕಿ.ಮೀ. ದೂರದವರೆಗೆ ಪೊಲೀಸರನ್ನು ಕರೆದೊಯ್ದು ಟೆಂಟ್ ಒಂದರಲ್ಲಿ ಅವಿತಿದ್ದ ಕಾಮುಕರನ್ನು ಹೊರಗೆಳೆಯಲು ಸಹಾಯ ಮಾಡಿದೆ. ಇದರಿಂದಾಗಿ ಪೊಲೀಸರು ಸುಲಭವಾಗಿ ಕಾಮುಕರನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.