Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಂಗ್ರೆಸ್ ನ ಹಿರಿಯ ನಾಯಕ ಬಿನೋದ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ಕೊಡಲು ಕಾರಣವೇನು ಗೊತ್ತಾ?

ಕಾಂಗ್ರೆಸ್ ನ ಹಿರಿಯ ನಾಯಕ ಬಿನೋದ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ಕೊಡಲು ಕಾರಣವೇನು ಗೊತ್ತಾ?
ಪಟನಾ , ಸೋಮವಾರ, 11 ಮಾರ್ಚ್ 2019 (17:15 IST)
ಪಟನಾ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಭಾರತೀಯ ಸೇನೆ ನಡೆಸಿದ ಏರ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳಿದ್ದಕ್ಕೆ ಬೇಸರಗೊಂಡು ಬಿಹಾರ ಕಾಂಗ್ರೆಸ್ ನ ಹಿರಿಯ ನಾಯಕ ಬಿನೋದ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.


ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಬಿನೋದ್ ಶರ್ಮಾ, ಬಾಲ್ ಕೋಟ್ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ಪಕ್ಷದ ಹೈಕಮಾಂಡ್ ತಳಮಟ್ಟದ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.


ಉಗ್ರ ನೆಲೆಗಳ ಮೇಲೆ ನಡೆಸಿದ ದಾಳಿಗೆ ಪದೇ ಪದೇ ಸಾಕ್ಷಿ ಕೇಳುವುದು ನಾಚಿಕೆಗೇಡು ಮತ್ತು ಬಾಲಿಶತನದ ವರ್ತನೆ, ಕಳೆದ 30 ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಈಗ ಇಂತಹ ಸನ್ನಿವೇಶದಲ್ಲಿ ಭಾರವಾದ ಹೃದಯದೊಂದಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್, ಟ್ವೀಟರ್ ಗೆ ಎಂಟ್ರಿ ಕೊಟ್ಟ ಸುಮಲತಾ ಅಂಬರೀಶ್