Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏರ್ ಸರ್ಜಿಕಲ್ ಸ್ಟ್ರೈಕ್ ವೇಳೆ ಪಾಕಿಸ್ತಾನ ಪ್ರತಿದಾಳಿ ನಡೆಸದಿರಲು ಕಾರಣವೇನೆಂದು ಗೊತ್ತಾ?

ಏರ್ ಸರ್ಜಿಕಲ್ ಸ್ಟ್ರೈಕ್  ವೇಳೆ ಪಾಕಿಸ್ತಾನ ಪ್ರತಿದಾಳಿ ನಡೆಸದಿರಲು ಕಾರಣವೇನೆಂದು ಗೊತ್ತಾ?
ಪಾಕಿಸ್ತಾನ , ಬುಧವಾರ, 27 ಫೆಬ್ರವರಿ 2019 (06:37 IST)
ಪಾಕಿಸ್ತಾನ : ಸರ್ಜಿಕಲ್ ಸ್ಟ್ರೈಕ್ 2 ದಾಳಿಯಿಂದ ತತ್ತರಿಸಿದ್ದ ಪಾಕಿಸ್ತಾನ ನಿನ್ನೆ ಸುದ್ದಿಗೋಷ್ಠಿ ಕರೆದು ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದೆ.


ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿ ಪ್ರವೇಶಿಸಿ ಏರ್‌ ಸ್ಟ್ರೈಕ್ ದಾಳಿ ನಡೆಸಿ ಉಗ್ರರನ್ನು ಸಂಹಾರ ಮಾಡಿತ್ತು. ದಾಳಿಯ ಬಗ್ಗೆ ಪಾಕಿಸ್ತಾನದ ಮಾಧ್ಯಮದವರು ರಕ್ಷಣಾ ಸಚಿವರ ಬಳಿ ಆ ವೇಳೆ ಪಾಕಿಸ್ತಾನ ವಾಯು ಪಡೆಯ ಏನು ಮಾಡುತ್ತಿತ್ತು? ಯಾಕೆ ಪ್ರತಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.


ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದಾಳಿಯು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಡೆದಿದೆ. ಭಾರತೀಯ ವಾಯು ಪಡೆಯು ಗಡಿಯನ್ನು ದಾಟಿ 5 ರಿಂದ 6 ಕಿ.ಮೀ. ಒಳಗಡೆ ಪ್ರವೇಶಿಸಿ, ಬಾಂಬ್ ಹಾಕಿದ್ದಾರೆ. ರಾತ್ರಿ ದಾಳಿ ನಡೆದಿದ್ದರಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದಿಲ್ಲ. ಈ ವೇಳೆ ನಮ್ಮ ಏರ್‍ಫೋರ್ಸ್ ಸಿದ್ಧವಾಗಿತ್ತು. ಆದರೆ ಕತ್ತಲಾಗಿದ್ದರಿಂದ ಯುದ್ಧ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.


ಹಾಗೇ ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ವಾಯು ಪಡೆ ಸಿದ್ಧವಾಗಿದ್ದು, ನಮ್ಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯದಲ್ಲಿಯೇ ಭಾರತೀಯ ವಾಯುಪಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಫಿನ್ಲ್ಯಾಂಡ್ ನಲ್ಲಿ ಮಕ್ಕಳನ್ನು ಪಡೆದ ದಂಪತಿಗೆ ಸರ್ಕಾರದಿಂದ ಸಿಗಲಿದೆ ಬಂಪರ್ ಆಫರ್