30 ವರ್ಷ ವಯಸ್ಸಿನ ಆರೋಪಿ ಮಹಿಳೆ, ತನ್ನ ನೆರೆಮನೆಯಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಆಕೆಯ ಪತಿ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದರಿಂದ ಆಕ್ರೋಶಗೊಂಡ ಪತ್ನಿ, ಪತಿಯ ದೇಹವನ್ನು ಎಂಟು ತುಂಡುಗಳಾಗಿ ಕತ್ತರಿಸಿ ನಗರದ ವಿವಿಧ ಭಾಗಗಳಲ್ಲಿ ಎಸೆದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಎಂಟು ತುಂಡುಗಳಾಗಿ ಕತ್ತರಿಸಿದ್ದ ಪತ್ನಿಗೆ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಅಪರಾಧದಲ್ಲಿ ನೆರವಾದ ಮಹಿಳೆಯ ಪ್ರಿಯಕರನಿಗೆ ಕೂಡ ಇದೇ ಶಿಕ್ಷೆಯನ್ನು ವಿಧಿಸಿ ಕೋರ್ಟ್ ಆದೇಶ ನೀಡಿದೆ.
ಎರಡು ಕಡೆಯ ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿಗಳು ವ್ಯವಸ್ಥಿತವಾಗಿ ಪತಿಯನ್ನು ಹತ್ಯೆ ಮಾಡಿ ಆತನ ಶವದ ಮುಂದೆ ಸೆಕ್ಸ್ ನಡೆಸಿರುವುದು ಸಾಬೀತಾಗಿದೆ ಎಂದು ಹೆಚ್ಚುವರಿ ನ್ಯಾಯಮೂರ್ತಿ ತೀರ್ಪಿನಲ್ಲಿ ತಿಳಿಸಿದ್ದಾರೆ,
ಹತ್ಯೆಯಾದ ಬಲ್ಜಿತ್ ಸಹೋದರ ಕುಲ್ಜಿತ್ ಸಿಂಗ್ ಸಹೋದರ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಆತನ ಇಬ್ಬರು ಸಹೋದರಿಯರು ಕೂಡಾ ಸಹೋದರ ಹತ್ಯೆಯಾಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಬಲ್ಜಿತ್ ಕಾಣೆಯಾಗಲು ಆತನ ಪತ್ನಿಯೇ ಕಾರಣ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ತನಿಖೆ ನಡೆಸಿದಾಗ ಪೂಜಾ ಪತಿಯ ಹತ್ಯೆ ಮಾಡಿರುವುದು ಕಂಡು ಬಂದಿದೆ. ಪೂಜಾಳನ್ನು ವಿಚಾರಣೆ ನಡೆಸಿದಾಗ ಪ್ರಿಯಕರನ ನೆರವಿನೊಂದಿಗೆ ಪತಿಯನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವುದಾಗಿ ಒಪ್ಪಿಕೊಂಡಿದ್ದಾಳೆ.