ಬೆಂಗಳೂರು : IRCTC ಟಿಕೆಟ್ ಬುಕಿಂಗ್ ಆ್ಯಪ್ ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳು ಕಾಣಿಸುತ್ತಿರುವುದರ ಕುರಿತು ವ್ಯಕ್ತಿಯೊಬ್ಬ ದೂರು ನೀಡಿ ಮುಜುಗರಕ್ಕೀಡಾಗಿದ್ದಾನೆ.
IRCTC ಟಿಕೆಟ್ ಬುಕಿಂಗ್ ಆ್ಯಪ್ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳು ಪದೇ ಪದೇ ಕಾಣಿಸುತ್ತವೆ. ಇದರಿಂದ ನಿಜಕ್ಕೂ ಮುಜುಗರ ಮತ್ತು ಕಿರಿಕಿರಿಪಡುವಂತಾಗಿದೆ” ಎಂದು ಟ್ವೀಟ್ ಮೂಲಕ ವ್ಯಕ್ತಿಯೊಬ್ಬ ಆರೋಪ ಮಾಡಿ ಈ ಟ್ವೀಟ್ ನ್ನು ಈತ ರೈಲ್ವೆ ಸಚಿವಾಲಯ, IRCTC ಮತ್ತು ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಟ್ಯಾಗ್ ಮಾಡಿದ್ದ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ IRCTC ಸಂಸ್ಥೆ, ಬಳಕೆಯ ಇತಿಹಾಸ ಹಾಗೂ ಬ್ರೌಸಿಂಗ್ ಮಾಡುವ ರೀತಿಯ ಆಧಾರದ ಮೇಲೆ ಜಾಹೀರಾತುಗಳನ್ನ ತೋರಿಸಲಾಗುತ್ತದೆ. ನೀವು ನಿಮ್ಮ ಎಲ್ಲಾ ಬ್ರೌಸರ್ ಕುಕಿಗಳನ್ನ ಮತ್ತು ಬಳಕೆಯ ಇತಿಹಾಸವನ್ನು ಡಿಲೀಟ್ ಮಾಡಿದರೆ ಇಂತಹ ಜಾಹೀರಾತುಗಳಿಂದ ಮುಕ್ತವಾಗಬಹುದು ಎಂದು ತಿಳಿಸಿದೆ. ಇದು ದೂರು ಕೊಟ್ಟ ವ್ಯಕ್ತಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.