ನವದೆಹಲಿ: ನಿನ್ನೆ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಬಿಜೆಪಿಯ ನಿಯಮದಂತೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ. ಹೀಗಾಗಿ ಕೇಂದ್ರ ಮಂತ್ರಿಯಾದ ಅಮಿತ್ ಶಾ ಅಧ್ಯಕ್ಷ ಸ್ಥಾನ ಪದತ್ಯಾಗ ಮಾಡಬೇಕಾಗಬಹುದು. ಆಗ ಬಿಜೆಪಿಯ ಚಾಣಕ್ಷ್ಯ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ ಸ್ಥಾನಕ್ಕೆ ಸಮರ್ಥ ನಾಯಕನನ್ನು ಕರೆತರುವುದು ಅನಿವಾರ್ಯ.
ಹೀಗಾಗಿ ಇದೀಗ ಬಿಜೆಪಿಯ ಹೊಸ ಅಧ್ಯಕ್ಷರು ಯಾರಾಗಬಹುದು ಎಂಬ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ಕಳೆದ ಬಾರಿ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಜೆಪಿ ನಡ್ಡಾ ಈ ಬಾರಿ ಕ್ಯಾಬಿನೆಟ್ ಹುದ್ದೆ ಪಡೆದಿಲ್ಲ. ಹೀಗಾಗಿ ಅವರನ್ನೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕರೆತಂದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.