ಹೈದರಾಬಾದ್ : 25 ವರ್ಷದ ವಿಚ್ಛೇಧಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಹಿನ್ನಲೆಯಲ್ಲಿ 20 ವರ್ಷದ ಯುವಕನೊಬ್ಬನನ್ನು ಬಂಧಿಸಿದ ಘಟನೆ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆ 28 ವರ್ಷದ ಎಲೆಕ್ಟ್ರೀಷಿಯನ್ ರವಿ ಎಂಬಾತನ ಜೊತೆಗೆ ಅನೈತಿಕ ಸೆಕ್ಸ್ ಸಂಬಂಧ ಹೊಂದಿದ್ದಳು. ಆತ ಅವಳಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಆಕೆ ಬೇರೆ ಪುರುಷರ ಜೊತೆ ಸಂಬಂಧ ಬೆಳೆಸಲು ಶುರುಮಾಡಿದ್ದಳು. ಇದರಿಂದ ಕೋಪಗೊಂಡ ರವಿ ತನ್ನ ಸ್ನೇಹಿತ ರವಿತೇಜಾ ಜೊತೆ ಸೇರಿ ಬೆಟ್ಟದ ಬಳಿ ಕರೆದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.
ಬಳಿಕ ಸಂತ್ರಸ್ತೆಯ ಕುಟುಂಬದವರು ಮಹಿಳೆ ಕಾಣೆಯಾದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.ರವಿತೇಜಾ ತಪ್ಪೊಪ್ಪಿಕೊಂಡ ಕಾರಣ ಸಂತ್ರಸ್ತೆಯ ಶವವನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರವಿತೇಜಾನನ್ನು ಬಂಧಿಸಿದ್ದಾರೆ.