Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಭಿಮಾನಿಗಳು ಪ್ರೆಗ್ನೆಂಟಾ? ಎಂದು ಕೇಳಿದ್ದಕ್ಕೆ ಸಮಂತಾ ಹೇಳಿದ್ದೇನು ಗೊತ್ತಾ?

ಅಭಿಮಾನಿಗಳು ಪ್ರೆಗ್ನೆಂಟಾ? ಎಂದು ಕೇಳಿದ್ದಕ್ಕೆ ಸಮಂತಾ ಹೇಳಿದ್ದೇನು ಗೊತ್ತಾ?
ಹೈದರಾಬಾದ್ , ಸೋಮವಾರ, 31 ಆಗಸ್ಟ್ 2020 (11:49 IST)
ಹೈದರಾಬಾದ್ : ಟಾಲಿವುಟ್ ನಟಿ ಸಮಂತಾ ಅಕ್ಕಿನೇನಿ ಮದುವೆಯಾಗಿ 2 ವರ್ಷ ಕಳೆದರೂ ಇನ್ನು ಸಿಹಿಸುದ್ದಿ ನೀಡಿಲ್ಲ. ಆದಕಾರಣ  ಅಭಿಮಾನಿಗಳು ನೀವು ಪ್ರೆಗ್ನೆಂಟಾ? ಎಂದು ಕೇಳಿದ್ದಕ್ಕೆ ಸಮಂತಾ ಕೊಟ್ಟ ಉತ್ತರ ಬಹಳ ಅಚ್ಚರಿಯಾಗಿತ್ತು.

ಹೌದು. ನಟಿ ಸಮಂತಾ  ಅವರು 2017 ಅಕ್ಟೋಬರ್ 7 ರಂದು ನಟ ನಾಗಚೈತನ್ಯ ಅವರನ್ನು ವಿವಾಹವಾದರು. ಅಂದಿನಿಂದ ಇಲ್ಲಿಯತನಕ ಯಾವುದೇ ಸಿಹಿಸುದ್ದಿಯನ್ನು ನೀಡಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದರು.

ಆದರೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ ಇತ್ತೀಚೆಗೆ ಅಭಿಮಾನಿಗಳ ಜೊತೆ ಚಾಟ್ ಮಾಡಿದ್ದಾರೆ. ಆ ವೇಳೆ ಅಭಿಮಾನಿಯೊಬ್ಬರು  ನೀವು ಪ್ರೆಗ್ನೆಂಟಾ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನಾನು 2017ರಿಂದ ಗರ್ಭಿಣಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ, ಈ ಮಗು ನಿಜವಾಗಿಯೂ ಹೊರಬರಲು ಬಯಸುವುದಿಲ್ಲ ಅನಿಸುತ್ತೆ ಎಂದು ಅಚ್ಚರಿಯ ಉತ್ತರ ನೀಡಿ ಅಭಿಮಾನಿಯನ್ನು ದಂಗಾಗಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಮಾಡಿದ್ರೆ ವಹಿಸಿಕೊಂಡು ಮಾತಾಡೋದು ಬೇಡ: ಡ್ರಗ್ ಮಾಫಿಯಾ ಬಗ್ಗೆ ಶಿವಣ್ಣ ಮಾತು